ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಂಪರೆಯ ಧಾರ್ಮಿಕ ನಂಬಿಕೆಯಲ್ಲಿ ವೈಜ್ಞಾನಿಕತೆ: ನಿಸರ್ಗ ನಾರಾಯಣಸ್ವಾಮಿ

Last Updated 6 ಮೇ 2019, 13:07 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಪರಂಪರೆಯಿಂದ ಆಚರಿಸಿಕೊಂಡು ಬರುತ್ತಿರುವ ಧಾರ್ಮಿಕ ನಂಬಿಕೆಯಲ್ಲಿ ವೈಜ್ಞಾನಿಕ ಕಾರಣಗಳಿವೆ’ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಇಲ್ಲಿನ ಗಿರಿಯಮ್ಮ ವೃತ್ತದಲ್ಲಿ ಶ್ರೀರಾಮ ಸೇವಾ ಸಮಿತಿ ವತಿಯಿಂದ ಸೋಮವಾರ ಶ್ರೀರಾಮ ನವಮಿ ಅಂಗವಾಗಿ ಶ್ರೀರಾಮ ಭಾವಚಿತ್ರಕ್ಕೆ ಪುಷ್ಪನಮನ ಮತ್ತು ಅರಳಿ ಕಟ್ಟಿ ಪೂಜೆಯ ನಂತರ ಪ್ರಸಾದ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.

ಮನಸ್ಸಿಗೆ ಶಾಂತಿ ಬೇಕು ಒತ್ತಡದ ಜೀವನದಲ್ಲಿ ನೆಮ್ಮದಿ ಬೇಕು, ಪೂಜೆ, ಜಾತ್ರೆ, ದಾಸೋಹ, ಕಲ್ಯಾಣೋತ್ಸವ ವಿವಿಧ ಧಾರ್ಮಿಕ ಆಚರಣೆಯಿಂದ ಪರಸ್ಪರ ವಿಶ್ವಾಸ, ನಂಬಿಕೆ ಮತ್ತು ಸಾಮರಸ್ಯ ಬೆಳೆಯಲು ಕಾರಣವಾಗುತ್ತದೆ ಎಂದು ಹೇಳಿದರು.

ಮೂಢನಂಬಿಕೆ ವಿವಿಧ ರೀತಿಯಲ್ಲಿ ಇದೆ, ದೇವರಿಗೆ ಕುರಿ, ಕೋಳಿ, ಕೋಣ ಬಲಿ ನೀಡುವುದು, ನರ ಬಲಿ ಕೊಟ್ಟರೆ ನಿಧಿ ಸಿಗಲಿದೆ ಎನ್ನುವ ಭ್ರಮೆ ದೇವರು ಮೈಮೇಲೆ ಬರುತ್ತದೆ ಎನ್ನುವುದಲ್ಲ ಅಪ್ಪಟ ಮೂಡ ನಂಬಿಕೆಗಳು. ಇಂತಹ ಕೆಟ್ಟ ನಂಬಿಕೆಗಳಿಂದ ದೂರವಿರಬೇಕು ಎಂದು ಹೇಳಿದರು.

ನಾಯಕರಾದ ದೇವರಾಜ್, ಎಂ.ಮೂರ್ತಿ, ಶಶಿಧರ್ ಇದ್ದರು. ನೂರಾರು ಜನರು ಪಾನಕ, ಮಜ್ಜಿಗೆ, ಕೊಸಂಬರಿ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT