ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರಕಾರ್ಮಿಕರ ಸೇವೆ ಅವಿಸ್ಮರಣೀಯ: ತಹಶೀಲ್ದಾರ್‌

Last Updated 19 ಅಕ್ಟೋಬರ್ 2018, 12:40 IST
ಅಕ್ಷರ ಗಾತ್ರ

ವಿಜಯಪುರ: ನಗರದಲ್ಲಿರುವ ಕಸವನ್ನು ತೆಗೆದು, ಸ್ವಚ್ಛ ಮತ್ತು ಆರೋಗ್ಯ ಪರಿಸರ ನಿರ್ಮಾಣಕ್ಕೆ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರ ಕೆಲಸ ಅವಿಸ್ಮರಣೀಯವಾಗದದ್ದು ಎಂದು ತಹಶೀಲ್ದಾರ್‌ ರಾಜಣ್ಣ ತಿಳಿಸಿದರು.

ನಗರದ ಪುರಸಭಾ ಕಾರ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಹಾಗೂ ದಸರಾ ಹಬ್ಬದ ಅಂಗವಾಗಿ ಯಂತ್ರೋಪಕರಣಗಳಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಪರಿಸರ ಸ್ವಚ್ಛತೆಗೆ ಕಾರ್ಯನಿರ್ವಹಿಸುವ ಪೌರಕಾರ್ಮಿಕರನ್ನು ಎಂದೂ ಕಡೆಗಣಿಸಬಾರದು. ಅವರನ್ನು ಎಲ್ಲರಂತೆಯೇ ಕಾಣುವ ಮನೋಭಾವ ಎಲ್ಲರೂ ರೂಢಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಅವರ ಸೇವೆಯನ್ನು ಪ್ರತಿನಿತ್ಯ ಗುರುತಿಸಬೇಕು. ಪೌರಕಾರ್ಮಿಕರ ಹಿತ ಕಾಪಾಡಲು ಎಲ್ಲ ಚುನಾಯಿತ ಮತ್ತು ಅಧಿಕಾರಿಗಳು ಬದ್ಧರಾಗಿರಬೇಕು ಎಂದರು.

ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸಿರುವ ಮುಖ್ಯಾಧಿಕಾರಿಯ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜಾಮೀಯಾ ಮಸೀದಿ ಅಧ್ಯಕ್ಷ ಎ.ಆರ್.ಹನೀಪುಲ್ಲಾ ಮಾತನಾಡಿ, ಪೌರಕಾರ್ಮಿಕರು ಮಕ್ಕಳು ಇದುವರೆವಿಗೂ ತಮ್ಮ ವೃತ್ತಿಯನ್ನು ಅವಲಂಭಿಸಿದ್ದಾರೆ. ಕಾರ್ಮಿಕರು ಕೆಲಸ ನಿರ್ವಹಿಸುವಾಗ ಆಧುನಿಕ ಯಂತ್ರೋಕರಣಗಳನ್ನು ಉಪಯೋಗಿಸದೆ ಬೇಗನೆ ರೋಗಕ್ಕೆ ತುತ್ತಾಗುತ್ತಿದ್ದಾರೆ. ಎಂದರು.

ಮುಂದಿನ ದಿನಗಳಲ್ಲಿ ಅರೋಗ್ಯದ ದೃಷ್ಟಿಯಿಂದ ಸಾಧನಾ ಸಲಕರಣೆಗಳನ್ನು ಕೆಲಸ ಮಾಡುವಾಗ ಬಳಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳುವಂತೆ ಕೋರಿದ ಅವರು ಮಕ್ಕಳನ್ನು ಶೈಕ್ಷಣಿಕವಾಗಿ ಬೆಳೆಸಿ ಉನ್ನತ ಉದ್ಯೋಗಕ್ಕೆ ಕಳುಹಿಸುವಂತೆ ಸಂಕಲ್ಪವನ್ನು ಮಾಡಬೇಕೆಂದರು.

ಪುರಸಭಾ ಸದಸ್ಯ ಎಸ್.ಭಾಸ್ಕರ್ ಮಾತನಾಡಿ, ಇಲ್ಲಿ ಸಾಕಷ್ಟು ಸಮಸ್ಯೆಗಳನ್ನು ಜನರೂ ಎದುರಿಸುತ್ತಿದ್ದಾರೆ. ಪೌರಕಾರ್ಮಿಕರೂ ಎದುರಿಸುತ್ತಿದ್ದಾರೆ ಎಂದರು.

2ನೇ ವಾರ್ಡಿನಲ್ಲಿರುವ ವಸತಿ ಗೃಹಗಳನ್ನು ಕೆಡವಿ ವೈಜ್ಞಾನಿಕವಾಗಿ ಜಿ+ ಮಾದರಿಯಲ್ಲಿ ಗೃಹಗಳನ್ನು ನಿರ್ಮಾಣ ಮಾಡಿ. ಪೌರಕಾರ್ಮಿಕರು ಹಾಗೂ ಇಲ್ಲಿನ ಸಿಬ್ಬಂದಿಗೆ ಅನುಕೂಲ ಮಾಡಿಕೊಡಬೇಕು ಎಂದರು.

ಸಾಕಷ್ಟು ಮಂದಿ ಪೌರಕಾರ್ಮಿಕರು ಬಾಡಿಗೆ ಮನೆಗಳಲ್ಲೇ ವಾಸ ಮಾಡಿಕೊಂಡಿದ್ದಾರೆ. ತಿಂಗಳು ಪೂರ್ತಿ ದುಡಿದ ಸಂಬಳ ಬಾಡಿಗೆಗಳು ಕಟ್ಟಲಿಕ್ಕೆ ಸರಿಹೋಗುತ್ತಿದೆ ಎಂದರು.

ಪುರಸಭಾ ಸದಸ್ಯ ಬಲಮುರಿ ಶ್ರೀನಿವಾಸ್ ಮಾತನಾಡಿ, ಪೌರಕಾರ್ಮಿಕರಿಗೆ ಅನುಕೂಲವಾಗುವಂತೆ ಸುಸಜ್ಜಿತವಾದ ಸ್ನಾನದ ಗೃಹಗಳನ್ನು ನಿರ್ಮಾಣ ಮಾಡುವುದರ ಜೊತೆಗೆ ಅವುಗಳಿಗೆ ಸೋಲಾರ್ ಅಳವಡಿಸುವ ಕಾರ್ಯವನ್ನು ಮಾಡಬೇಕು. ಇದರಿಂದ ಅವರು ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಶುಭ್ರತೆಯಿಂದ ಮನೆಗಳಿಗೆ ತೆರಳುವಂತಾಗುತ್ತದೆ ಎಂದರು.

ಹಿರಿಯ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಪೌರಕಾರ್ಮಿಕರ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದ ಕಾರ್ಮಿಕರಿಗೆ ಬಹುಮಾನಗಳನ್ನು ವಿತರಣೆ ಮಾಡಿದರು.

ಪುರಸಭೆ ಕಾರ್ಯಾಲಯವನ್ನು ವಿದ್ಯುತ್ ದೀಪಾಂಲಕಾರಗಳು, ಹಾಗೂ ಬಣ್ಣ ಬಣ್ಣದ ಹೂಗಳಿಂದ ಶೃಂಗಾರ ಮಾಡಲಾಗಿತ್ತು.

ಪುರಸಭೆಯಲ್ಲಿನ ಎಲ್ಲಾ ವಾಹನಗಳಿಗೆ ಪೂಜೆ ಸಲ್ಲಿಸಿದ ನಂತರ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಆಡಳಿತಾಧಿಕಾರಿ ಹಾಗೂ ಪುರಸಭಾ ಸದಸ್ಯರು ಮೆರವಣಿಗೆಗೆ ಚಾಲನೆ ನೀಡಿದರು.

ಪುರಸಭಾ ಮುಖ್ಯಾಧಿಕಾರಿ ಎ.ಎಚ್.ನಾಗರಾಜ್, ಸದಸ್ಯರಾದ ಎಂ.ಸತೀಶ್ ಕುಮಾರ್, ಮುನಿಚಿನ್ನಪ್ಪ, ಮುಖಂಡ ಮಹಬೂಬ್ ಪಾಷ, ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ಚಂದ್ರಶೇಖರ್, ಪರಿಸರ ಅಭಿಯಂತರ ಮೋಹನ್, ಎಂಜಿನಿಯರ್ ರಘು, ವಿಜಯಕುಮಾರ್, ಶಿವನಾಗೇಗೌಡ, ಗೋಪಾಲ್, ಸರಸ್ವತಮ್ಮ, ಲಿಂಗಣ್ಣ, ಮಂಜುನಾಥ್, ಲಕ್ಷ್ಮೀನಾರಾಯಣ, ಪ್ರಸನ್ನ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT