ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆತ್ಮವೇ ನಿಜವಾದ ಮಿತ್ರ’

Last Updated 14 ಜೂನ್ 2019, 13:21 IST
ಅಕ್ಷರ ಗಾತ್ರ

ಹೊಸಕೋಟೆ: ‘ನಿನಗೆ ನೀನೆ ನಿಜವಾದ ಮಿತ್ರ. ಸತ್ಕರ್ಮದಲ್ಲಿರುವ ಆತ್ಮವೇ ಮನುಷ್ಯನಿಗೆ ನಿಜವಾದ ಮಿತ್ರನಾಗಬೇಕು’ ಎಂದು ಜೈನ ಮುನಿ ಆಚಾರ್ಯ ಮಹಾಶ್ರವಣ್ ಅವರು ಹೇಳಿದರು.

ಅಹಿಂಸಾ ಪಾದಯಾತ್ರೆಯಲ್ಲಿ ಹೊಸಕೋಟೆಗೆ ಬಂದಿದ್ದ ಅವರು ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದರು.

‘ಇತರರಿಗೆ ಹಿಂಸೆ ಮಾಡದೆ, ಯಾವ ಜೀವಿಗಳಿಗೂ ನೋವುಂಟು ಮಾಡದೆ ಇರುವಂತಹ ವ್ಯಕ್ತಿಯ ಆತ್ಮವೇ, ಆತನಿಗೆ ಉತ್ತಮ ಗೆಳೆಯ. ಯಾರು ತನ್ನ ಆತ್ಮದೊಂದಿಗೆ ಉತ್ತಮ ಗೆಳೆತನ ಹೊಂದಿರುತ್ತಾರೋ ಅವರು ಮಾತ್ರ ಹೊರಗಿನ ವ್ಯಕ್ತಿಗಳೊಂದಿಗೆ ಉತ್ತಮ ಸ್ನೇಹ ಸಂಪಾದಿಸುತ್ತಾರೆ’ ಎಂದರು.

‘ತೀರ್ಥಂಕರರು ಜ್ಞಾನಿಗಳು. ನಮಗೆ ದಿನಾಂಕಕ್ಕಿಂತ ಪಂಚಾಂಗದ ತಿಥಿ ಮುಖ್ಯ. ಅದರ ಪ್ರಕಾರ ಇಂದು ಆಚಾರ್ಯ ಮಹಾಪ್ರಜ್ಞರ ಜನ್ಮದಿನ. ಅವರು ಒಂದು ಬೀಜದಂತೆ; ಅದರಿಂದ ಹುಟ್ಟಿದ ವಟವೃಕ್ಷದ ಅಡಿಯಲ್ಲಿ ನಾವು ಇದ್ದೇವೆ. ಅವರ ನೆರಳಿನಲ್ಲಿ ವಿರಮಿಸುತ್ತಿದ್ದೇವೆ’ ಎಂದರು. ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT