ರಾಜ್ಯದಲ್ಲಿ ದೋಸ್ತಿ, ಗ್ರಾಮದಲ್ಲಿ ಕುಸ್ತಿ !

7

ರಾಜ್ಯದಲ್ಲಿ ದೋಸ್ತಿ, ಗ್ರಾಮದಲ್ಲಿ ಕುಸ್ತಿ !

Published:
Updated:
Deccan Herald

ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಮೈತ್ರಿ ಸರ್ಕಾರದ ದೋಸ್ತಿ ಆಡಳಿತವಾದರೆ ತಾಲ್ಲೂಕಿನ ತಂಬೇನಹಳ್ಳಿ ಗ್ರಾಮದಲ್ಲಿ ಇದೇ ಕಾರ್ಯಕರ್ತರು ಕುಡಿಯುವ ನೀರಿಗಾಗಿ ಜಂಗಿ ಕುಸ್ತಿಗೆ ಇಳಿದಿದ್ದಾರೆ.

ತಂಬೇನಹಳ್ಳಿ ಗ್ರಾಮದ ಕಾಲೊನಿಯಲ್ಲಿ ಅತಿಹೆಚ್ಚು ಜೆಡಿಎಸ್ ಕಾರ್ಯಕರ್ತರ ಮನೆಗಳಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗ್ರಾಮದಲ್ಲಿ ಆ ಪಕ್ಷಕ್ಕೆ ಹೆಚ್ಚಿನ ಮತ ನೀಡಿದ್ದರು. ಹೀಗಾಗಿ ಇದೇ ದ್ವೇಷವನ್ನೇ ಮನಸ್ಸಿನಲ್ಲಿಟುಕೊಂಡಿರುವ ಕಾಂಗ್ರೆಸ್ ಕಾರ್ಯಕರ್ತರು ಸ್ಥಳೀಯ ಗ್ರಾಮದಲ್ಲಿನ ಜೆಡಿಎಸ್ ಕಾರ್ಯಕರ್ತರು ವಾಸವಿರುವ ಬೀದಿಯಲ್ಲಿನ ಟ್ಯಾಂಕ್ ಗೆ ಬರುತ್ತಿದ್ದ ನೀರು ನಿಲ್ಲಿಸಿದ್ದಾರೆ. ಗ್ರಾಮದಲ್ಲಿ ಕುಡಿಯಲು ನೀರಿಲ್ಲದೆ ಜನ ಪರದಾಡುವಂತಾಗಿದೆ ಎಂದು ಗ್ರಾಮಕ್ಕೆ ಭೇಟಿ ನೀಡಿದ್ದ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ ದೂರಿದ್ದಾರೆ.

ತಾಲ್ಲೂಕು ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಚ್.ಎಂ.ದ್ಯಾಮಪ್ಪ ಈ ಬಗ್ಗೆ ಮಾಹಿತಿ ನೀಡಿ, ಸರ್ಕಾರಿ ಭೂಮಿ ಇಲ್ಲದ ಕಾರಣದಿಂದಾಗಿ ಖಾಸಗಿ ಭೂಮಿಯಲ್ಲಿ ನೀರಿನ ಟ್ಯಾಂಕ್ ಕೂರಿಸಲಾಗಿತ್ತು. ಆದರೆ, ಈಗ ವೈಯಕ್ತಿಕ ಕಾರಣದಿಂದಾಗಿ ಖಾಸಗಿ ವ್ಯಕ್ತಿ ಸಾರ್ವಜನಿಕರಿಗೆ ನೀರು ಹಿಡಿದುಕೊಳ್ಳಲು ಅವಕಾಶ ನೀಡದೆ ಕಾಂಪೌಂಡ್ ನಿರ್ಮಿಸಿಕೊಂಡಿದ್ದಾರೆ. ಇದರಲ್ಲಿ ಯಾವುದೇ ರಾಜಕೀಯ ದ್ವೇಷ ಇಲ್ಲ. ಒಂದೆರಡು ದಿನಗಳಲ್ಲಿ ಸೂಕ್ತ ಸ್ಥಳ ಹುಡುಕಿ ಟ್ಯಾಂಕ್ ನಿರ್ಮಿಸಲಾಗುವುದು ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !