ಶೋಭ ಬೀಸೇಗೌಡರಿಗೆ ರಾಜ್ಯ ಮಟ್ಟದ ಕೃಷಿ ಪ್ರಶಸ್ತಿ

ಗುರುವಾರ , ಮಾರ್ಚ್ 21, 2019
27 °C

ಶೋಭ ಬೀಸೇಗೌಡರಿಗೆ ರಾಜ್ಯ ಮಟ್ಟದ ಕೃಷಿ ಪ್ರಶಸ್ತಿ

Published:
Updated:
Prajavani

ದೇವನಹಳ್ಳಿ: ತಾಲ್ಲೂಕಿನ ದುದ್ದನಹಳ್ಳಿ ಗ್ರಾಮದ ರೈತ ಮಹಿಳೆ ಶೋಭಾ ಬೀಸೇಗೌಡರಿಗೆ 2017–18ನೇ ಸಾಲಿನ ರಾಜ್ಯಮಟ್ಟದ ಕೃಷಿ ಪ್ರಶಸ್ತಿ ಸಂದಿದೆ. 

ಪ್ರಶಸ್ತಿ ಕುರಿತು ಮಾತನಾಡಿದ ಅವರು, ‘ಅನೇಕ ವರ್ಷಗಳಿಂದ ಮಳೆ ಆಧಾರಿತ ಒಣ ಬೇಸಾಯ ಕ್ರಮಬದ್ಧವಾಗಿ ಮಾಡಿಕೊಂಡು ಬರುತ್ತಿದ್ದೇನೆ. ಕಡಿಮೆ ಮಳೆಯಲ್ಲೂ ಬೆಳೆಯಬಹುದಾದ ಅನೇಕ ಮಾರ್ಗಗಳಿವೆ. ಯಥಾತ್ತಾಗಿ ಅನುಸರಿಸುವ ಕ್ರಮಗಳು ಅತಿ ಮುಖ್ಯ. ಹತ್ತಾರು ವರ್ಷದಿಂದ ನನ್ನದೆ ಚಿಂತನೆ ಇಟ್ಟುಕೊಂಡು ಕೃಷಿ ಚಟುವಟಿಕೆ ಪ್ರಯೋಗದಲ್ಲಿದ್ದೇನೆ’ ಎಂದು ಅಭಿಪ್ರಾಯ ಹಂಚಿಕೊಂಡರು.

ಬಯಲು ಸೀಮೆ ಪ್ರದೇಶದಲ್ಲಿ ಪ್ರಮುಖ ಆಹಾರ ಬೆಳೆಯಾಗಿರುವ ರಾಗಿ ಧಾನ್ಯಕ್ಕೆ ಹೆಚ್ಚು ಒತ್ತು ನೀಡಬೇಕಾಗಿದೆ. ಒಂದು ಹೆಕ್ಟೇರ್ ಜಮೀನಿನಲ್ಲಿ ಬಿತ್ತನೆ ಮಾಡಲು ಬೇಕಾದ ಗುಣಮಟ್ಟದ ಬೀಜದ ಬಳಕೆ, ಕೊಟ್ಟಿಗೆ ಮತ್ತು ಸಾವಯವ ಗೊಬ್ಬರ, ಲಘು ಪೋಷಕಾಂಶದ ಗೊಬ್ಬರದ ಬಳಕೆ, ಬೆಳೆಗಳ ಮಧ್ಯೆ ಅಂತರ ಬೇಸಾಯ (ಹುರಳಿ ಮತ್ತು ಅವರೆ), ಬೀಜೋಪಚಾರ, ಸಸ್ಯ ಸಂರಕ್ಷಣಾ ಕ್ರಮ ಎಲ್ಲವನ್ನು ಮಾನದಂಡವನ್ನಾಗಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !