ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿನಾಯಿ ದಾಳಿ: 15 ಕುರಿ ಸಾವು

Last Updated 2 ಸೆಪ್ಟೆಂಬರ್ 2022, 6:11 IST
ಅಕ್ಷರ ಗಾತ್ರ

ವಿಜಯಪುರ (ಬೆಂ.ಗ್ರಾಮಾಂತರ):ಹೋಬಳಿಯ ಗೊಡ್ಲುಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಮ್ಮಸಂದ್ರ ಗ್ರಾಮದಲ್ಲಿ ಬೀದಿ ನಾಯಿಗಳ ದಾಳಿಗೆ 15ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ.

ನಾಯಿ ಕಾಟದಿಂದ ಕಂಗಾಲಾಗಿದ್ದ ರೈತರು ಕೆಲ ದಿನಗಳಿಂದ ಗ್ರಾಮೀಣ ಭಾಗದಲ್ಲಿ ಬೋನಿನಲ್ಲಿ ಕುರಿಗಳನ್ನು ಕೂಡಿಹಾಕಿ ಸಾಕುತ್ತಿದ್ದರು. ಆದರೂ, ಹಲವಾರು ಕುರಿಗಳು ನಾಯಿಗಳ ದಾಳಿಗೆ ಬಲಿಯಾಗಿವೆ.

ರೈತ ಮಹಿಳೆ ರತ್ನಮ್ಮ ಮಾತನಾಡಿ, ‘ನಾನು ಕುರಿಗಳನ್ನೇ ನಂಬಿಕೊಂಡು ಜೀವನ ಮಾಡುತ್ತಿದ್ದೇನೆ. ಕೆಲವು ದಿನಗಳಿಂದ ರಾತ್ರಿ ವೇಳೆ ಮನೆಗಳ ಬಳಿ ನಾಯಿ ಕಾಟದಿಂದ ಕುರಿಗಳು ಬಲಿಪಶುವಾಗುತ್ತಿವೆ. ನನ್ನ ಜೀವನ ಸಾಗಿಸಲು ನೆರವಾಗುತ್ತಿದ್ದ ಕುರಿಗಳು ಈ ರೀತಿ ನಾಯಿಗಳಿಗೆ ಬಲಿಯಾಗಿರುವುದು ಸಂಕಷ್ಟ ತಂದೊಡ್ಡಿದೆ’ ಎಂದು ನೋವು ತೋಡಿಕೊಂಡರು.

ರೈತ ರವಿಶಂಕರ್ ಮಾತನಾಡಿ, ‘ನಾನು ಕುರಿ ಸಾಕಾಣಿಕೆಗಾಗಿ ಬೋನ್ ಮಾಡಿಸಿದ್ದೆ. ಆದರೆ, ಬೋನ್ ತೆರೆದು ಮೇವು ತರಲೆಂದು ಹೋಗಿ ಬರುವಷ್ಟರಲ್ಲಿ ಮೂರು ಕುರಿಗಳ ಮೇಲೆ ನಾಯಿಗಳು ದಾಳಿ ಮಾಡಿವೆ. ಇದರಿಂದ ₹ 30 ಸಾವಿರಕ್ಕೂ ಹೆಚ್ಚು ಬೆಲೆ ಬಾಳುವ ಕುರಿಗಳು ಸಾವಿಗೀಡಾಗಿವೆ’ ಎಂದು ತಿಳಿಸಿದರು.

ಗ್ರಾಮದಲ್ಲಿ ನಾಯಿಗಳ ಕಾಟ ಹೆಚ್ಚಾಗಿದೆ. ಕೂಡಲೇ ಸ್ಥಳೀಯ ಪಂಚಾ ಯಿತಿ ಅಧಿಕಾರಿಗಳು ಅವುಗಳನ್ನು ಹಿಡಿದು ಬೇರೆಡೆ ಬಿಡಬೇಕು. ಕುರಿ ಗಳನ್ನು ಕಳೆದುಕೊಂಡಿರುವ ನಮಗೆ ಪರಿಹಾರ ನೀಡಬೇಕು’ ಎಂದು ಸ್ಥಳೀಯ ರಾದ ಗೋವಿಂದರಾಜು, ಕೆ.ಎನ್. ರಮೇಶ್, ಶಿವಣ್ಣ, ಮಂಜುನಾಥ್, ನಾರಾಯಣಸ್ವಾಮಿ, ಲಕ್ಷ್ಮೀನಾರಾಯಣ, ಮುನಿಯಪ್ಪ, ರಂಗಣ್ಣ
ಒತ್ತಾಯಿಸಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೆಂಕಟೇಶ್ ಮಾತನಾಡಿ, ‘ನಾಯಿಗಳ ದಾಳಿಗೆ ಕುರಿಗಳು ತುತ್ತಾಗಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಪಂಚಾಯಿತಿಗೆ ಬರುವ ಆದಾಯ ತೀರಾ ಕಡಿಮೆ ಇದೆ. ಆದ್ದರಿಂದ ನಾವು ಪರಿಹಾರ ವಿತರಿಸಲು ಸಾಧ್ಯವಿಲ್ಲ. ನಾಯಿಗಳ ನಿಯಂತ್ರಣಕ್ಕಾಗಿ ಇದುವರೆಗೂ ಪಂಚಾಯಿತಿಯಲ್ಲಿ ಪ್ರತ್ಯೇಕವಾಗಿ ಅನುದಾನ ಮೀಸಲಿಟ್ಟಿಲ್ಲ. ಈ ಕುರಿತು ಚರ್ಚೆ ಮಾಡಲಾಗುವುದು’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT