ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

 ಸೈಬರ್ ಅಪರಾಧ ತಡೆಗೆ ಕಾನೂನು ಅವಶ್ಯ

Last Updated 20 ಜನವರಿ 2020, 16:39 IST
ಅಕ್ಷರ ಗಾತ್ರ

ದೇವನಹಳ್ಳಿ: ಮಾಹಿತಿ ತಂತ್ರಜ್ಞಾನ ಬೆಳೆದಂತೆ ಅನುಕೂಲದೊಂದಿಗೆ ಸೈಬರ್ ಅಪರಾಧ ಕೂಡ ಬೆಳೆಯುತ್ತಿದ್ದು, ಕಡಿವಾಣಕ್ಕೆ ಸೂಕ್ತ ಕಾನೂನಿನ ಅವಶ್ಯ ಇದೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಆಡಳಿತದ ನ್ಯಾಯಾಧೀಶರಾದ ಬಿ.ವಿ.ನಾಗರತ್ನ ಹೇಳಿದರು.

ಇಲ್ಲಿನ ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ಕರ್ನಾಟಕ ಜುಡಿಶೀಯಲ್ ಅಕಾಡೆಮಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಏರ್ಪಡಿಸಿದ್ದ ’ವಿದ್ಯುನ್ಮಾನ ಪುರಾವೆ‘(Electronic Evidence) ವಿಷಯ ಕುರಿತು ನಡೆದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುವಾಗ ಮತ್ತು ನ್ಯಾಯಾಂಗದಲ್ಲಿ ಅಪರಾಧ ಪ್ರಕರಣಗಳ ಕುರಿತು ಪರಿಶೀಲಿಸುವಾಗ ಬಹುತೇಕ ಪ್ರಕರಣಗಳು ಡಿಜಿಟಲ್ ತಂತ್ರಜ್ಞಾನಕ್ಕೆ ಸಂಬಂಧಿಸಿದ್ದಾಗಿವೆ. ಮಾಹಿತಿ ತಂತ್ರಜ್ಞಾನ ಕಾಯ್ದೆ ಜಾರಿಗೆ ಬಂದು 20ವರ್ಷ ಕಳೆದಿದ್ದು ಸೂಕ್ತ ಕಾನೂನಿನ ಅರಿವು ಇಲ್ಲದಿರುವುದರಿಂದ ತಂತ್ರಜ್ಞಾನ ಬೆಳೆದಂತೆ ಸೈಬರ್ ಕ್ರೈಂ, ಡಿಜಿಟಲ್ ಅಪರಾಧಗಳು ಸಹ ಇಮ್ಮಡಿಯಾಗುತ್ತಿದ್ದು ದುರ್ಬಳಕೆಯಾಗುತ್ತಿರುವುದು ವಿಷಾದನಿಯ ಎಂದರು.

ಸೈಬರ್ ಸೆಕ್ಯೂರಿಟಿ ಮತ್ತು ಕಾನೂನು ತರಬೇತುದಾರ ಡಾ.ಅನಂತಪ್ರಭು ಮಾತನಾಡಿ, ಸೈಬರ್ ಸೆಕ್ಯೂರಿಟಿ ಹಾಗೂ ಡಿಜಿಟಲ್ ಹ್ಯಾಕಿಂಗ್ ವಿಷಯದ ಕುರಿತು ಪೋಲಿಸ್ ಅಧಿಕಾರಿಗಳಿಗೆ ಹಾಗೂ ನ್ಯಾಯಾಲಯದ ಸಿಬ್ಬಂದಿಗೆ ಇನ್ನಷ್ಟು ತರಬೇತಿ ನೀಡಬೇಕಾಗಿದೆ ಎಂದು ಹೇಳಿದರು.

ರಾಜ್ಯ ಹೈಕೋರ್ಟ್ ನ್ಯಾಯಾಧೀಶ ಕೆ.ಎನ್.ಫಣೀಂದ್ರ, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚೆನ್ನಣ್ಣನವರ್, ಸಿಇಒ ಎನ್.ಎಂ.ನಾಗರಾಜು, ಜಿಲ್ಲಾ ನ್ಯಾಯಾಧೀಶರಾದ ವಿ.ಶ್ರೀಶಾನಂದ, ಕರ್ನಾಟಕ ಜುಡಿಶೀಯಲ್ ಅಕಾಡೆಮಿ ನಿರ್ದೇಶಕರಾದ ಪ್ರಭಾವತಿ.ಎಂ.ಹಿರೇಮಠ, ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಎಸ್.ಆರ್.ಸೋಮಶೇಖರ್, ಪಬ್ಲಿಕ್ ಪ್ರಾಸಿಕ್ಯೂಟರ್ ನಮಿತಾ ಮಹೇಶ್.ಬಿ.ಜಿ, ಸೈಬರ್ ಕ್ರೈಂ ಪೊಲೀಸ್ ಇನ್‌ಸ್ಪೆಕ್ಟರ್ ಯಶವಂತ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT