ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

 ವಿದ್ಯಾರ್ಥಿಗಳು ಸೇವಾ ಮನೋಭಾವ ರೂಢಿಸಿಕೊಳ್ಳಿ: ಬಿ.ವಿ.ಸತೀಶಗೌಡ

Last Updated 25 ಫೆಬ್ರುವರಿ 2020, 13:46 IST
ಅಕ್ಷರ ಗಾತ್ರ

ಸೂಲಿಬೆಲೆ: ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶ್ರಮದಾನ ಶಿಬಿರದಲ್ಲಿ ಪಾಲ್ಗೊಳ್ಳುತ್ತಿರುವ ವಿದ್ಯಾರ್ಥಿಗಳ ಸೇವೆ ಅಮೂಲ್ಯ. ದಿನ ನಿತ್ಯದ ಬದುಕಿನಲ್ಲಿಯೂ ಸೇವಾ ಮನೋಭಾವ ರೂಢಿಸಿಕೊಳ್ಳಬೇಕು ಎಂದು ಸೂಲಿಬೆಲೆ ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ.ಸತೀಶಗೌಡ ಹೇಳಿದರು.

ಹೊಸಕೋಟೆ ತಾಲ್ಲೂಕಿನ, ಟಿ.ಅಗ್ರಹಾರ ಗ್ರಾಮದಲ್ಲಿ, ಸೂಲಿಬೆಲೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿಶೇಷ ವಾರ್ಷಿಕ ಶ್ರಮದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಸಮರ್ಪಣೆಯ ಮನೋಭಾವದಿಂದ ಸಮಾಜವನ್ನು ಪ್ರೀತಿಸುವಂತಾಗಬೇಕು. ಎನ್.ಎಸ್.ಎಸ್ ಆಶಯದಂತೆ ನನಗಾಗಿ ಅಲ್ಲ, ನಿಮಗಾಗಿ ಎಂಬುವಂತಾಗಬೇಕು. ಆಗ ರಾಷ್ಟ್ರೀಯ ಸೇವಾ ಯೋಜನೆಯ ಧ್ಯೇಯ, ಉದ್ದೇಶಗಳು ಈಡೇರುತ್ತವೆ. ಎಂದ ಅವರು ಗ್ರಾಮಸ್ಥರಿಗೆ ಸ್ವಚ್ಛತೆಯ ಜತೆಗೆ ಅರಿವು ಮೂಡಿಸುವ ಕೆಲಸವನ್ನು ಸಹ ವಿದ್ಯಾರ್ಥಿಗಳು ಮಾಡಬೇಕು’ ಎಂದರು.

ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾಧಿಕಾರಿ ಡಾ.ಎನ್.ಎ.ಆದಿನಾರಾಯಣ್ ಮಾತನಾಡಿ, ಸೇವಾ ಯೋಜನೆ ಶ್ರಮದಾನ ಕಾರ್ಯಕ್ರಮದ ಯೋಜನೆ ಮಹತ್ವ ತಿಳಿಸಿಕೊಟ್ಟರು.

ಪ್ರಾಂಶುಪಾಲ ಪ್ರೋ.ನಾರಾಯಣಸ್ವಾಮಿ ಮಾತನಾಡಿ, ‘ಸಮಾಜಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಬೇಕು. ಟಿ.ಅಗ್ರಹಾರ ಗ್ರಾಮದಲ್ಲಿ ಸ್ವಚ್ಛತೆ ಮೂಡಿಸಿ ನಮ್ಮ ಕಾಲೇಜಿನ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗುವ ಕೆಲಸ ಮಾಡಬೇಕು. ವಿದ್ಯಾರ್ಥಿಗಳು ಶಿಸ್ತು ಮತ್ತು ದಕ್ಷತೆ ಮೈಗೂಡಿಸಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು.

ಟಿ.ಅಗ್ರಹಾರ ಶಾಲೆ ಮುಖ್ಯ ಶಿಕ್ಷಕ ಚಂದ್ರಶೇಖರ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣಪ್ಪ, ವೆಂಕಟಲಕ್ಷ್ಮಮ್ಮ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಅಂಜುಂ ಸೈಯದ್ ಮಹಬೂಬ್, ಭಾಗ್ಯಮ್ಮ, ಡಾ.ಸಾದಿಕ್ ಪಾಷ, ಸದಾಶಿವಮೂರ್ತಿ, ರವಿಚಂದ್ರ ಉಪನ್ಯಾಸಕರಾದ ಗಿರೀಶ್, ಭಾರತಿ, ಮಂಜುಳಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT