ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಗೆ ದೂರದೃಷ್ಟಿ, ಏಕಾಗ್ರತೆ ಅತ್ಯಗತ್ಯ

Last Updated 5 ಸೆಪ್ಟೆಂಬರ್ 2019, 13:10 IST
ಅಕ್ಷರ ಗಾತ್ರ

ವಿಜಯಪುರ: ‘ವಿದ್ಯಾರ್ಥಿಗಳು ತಮಗೆ ಸಿಗುವ ಎಲ್ಲ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡರೆ ಜೀವನದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲಿಕ್ಕೆ ಸಾಧ್ಯವಾಗುತ್ತದೆ’ ಎಂದು ಪ್ರಗತಿ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಂ. ಸತೀಶ್‌ಕುಮಾರ್ ಹೇಳಿದರು.

ಇಲ್ಲಿನ ಪ್ರಗತಿ ಪ್ರೌಢಶಾಲೆಯ ಆವರಣದಲ್ಲಿ ಗುರುವಾರ ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ದೂರದೃಷ್ಟಿ, ಸಾಧಿಸಬೇಕೆನ್ನುವ ಛಲ, ನಿರಂತರ ಅಭ್ಯಾಸ, ಏಕಾಗ್ರತೆ ಮೈಗೂಡಿಸಿಕೊಂಡಾಗ ಏನನ್ನಾದರೂ ಸಾಧಿಸಬಹುದು. ಉತ್ತಮ ಸಾಧನೆ ಮಾಡಿರುವ ಸಾಧಕರು ನಿಮಗೆ ಪ್ರೇರಣೆಯಾಗಬೇಕು. ಶೈಕ್ಷಣಿಕ ಹಂತದಲ್ಲಿ ಮಾಡುವಂತಹ ಉತ್ತಮ ಸಾಧನೆ ನಿಮ್ಮ ಜೀವನ ಬೆಳಗುತ್ತದೆ ಎಂದರು.

ನಿರ್ದೇಶಕ ಎಸ್. ಕೃಪಾಶಂಕರ್ ಮಾತನಾಡಿ, ಜ್ಞಾನವೆಂಬುದು ಒಬ್ಬರ ಸ್ವತ್ತಲ್ಲ, ಅದನ್ನು ಆರಾಧಿಸುವವರು, ಗಳಿಸಬೇಕೆನ್ನುವ ಹಂಬಲವಿರುವವರಿಗೆ ಅದು ಲಭಿಸುತ್ತದೆ. ಒಮ್ಮೆ ಗಳಿಸಿಕೊಂಡ ಆಸ್ತಿ, ಅಂತಸ್ತು, ಅಧಿಕಾರ ಎಲ್ಲವನ್ನೂ ಒಂದು ದಿನ ಕಳೆದುಕೊಳ್ಳಬೇಕಾಗುತ್ತದೆ. ಆದರೆ, ನಾವು ಪಡೆದುಕೊಂಡ ಜ್ಞಾನ ನಮ್ಮ ಅಂತ್ಯದ ದಿನದವರೆಗೂ ನಮ್ಮ ಜೊತೆಗಿದ್ದು ಸಾಧಕರನ್ನಾಗಿ ಮಾಡುತ್ತದೆ ಎಂದರು.

ಮಕ್ಕಳು ಕೇವಲ ಪಠ್ಯಚಟುವಟಿಕೆಗಳಿಗಷ್ಟೇ ಸೀಮಿತವಾಗಬಾರದು. ಪಠ್ಯೇತರ ಚಟುವಟಿಕೆಗಳಿಂದಲೂ ಅಪಾರವಾದ ಪಾಂಡಿತ್ಯ ಸಂಪಾದನೆ ಮಾಡಬಹುದಾಗಿ ಸಿಗುವ ಅವಕಾಶಗಳನ್ನು ಉತ್ತಮವಾಗಿ ಬಳಕೆ ಮಾಡಿಕೊಳ್ಳಿ ಎಂದರು.

ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ವಿಜೇತರಾಗಿರುವ 13 ಮಂದಿ ಮಕ್ಕಳನ್ನು ಶಾಲಾ ಆಡಳಿತ ಮಂಡಳಿಯ ಸದಸ್ಯರು ಸೇರಿದಂತೆ ಶಾಲಾ ಶಿಕ್ಷಕರು ಅಭಿನಂದಿಸಿದರು. ಮುಖ್ಯಶಿಕ್ಷಕ ವಿ.ಬಸವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT