ಶನಿವಾರ, ಡಿಸೆಂಬರ್ 7, 2019
22 °C

ಸೂಲಿಬೆಲೆ: ಅದ್ದೂರಿ ವಿಘ್ನೇಶ್ವರ ವಿಸರ್ಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೂಲಿಬೆಲೆ: ಪಟ್ಟಣದ ಕುರುಬರ ಪೇಟೆ ರೈತ ಯುವಕರ ಸಂಘದ ವತಿಯಿಂದ ವಿಘ್ನೇಶ್ವರ ಪ್ರತಿಷ್ಠಾಪನೆ ಮಾಡಲಾಗಿತ್ತು.

ಭಾನುವಾರ ಮೆರವಣಿಗೆಯಲ್ಲಿ ಗ್ರಾಮದ ಎಲ್ಲ ದೇವರುಗಳನ್ನು ಮುತ್ತಿನ ಪಲ್ಲಕಿಗಳ ಮೂಲಕ ಪ್ರಮುಖ ಬೀದಿಗಳಲ್ಲಿ ಮೆರವಣೆಗೆ ಮಾಡಿ ವಿಘ್ನೇಶ್ವರನನ್ನು ವಿಸರ್ಜಿಸಲಾಯಿತು.

ವಿಸರ್ಜನೆ ಹಿಂದಿನ ದಿನ ವಾಡಿಕೆಯಂತೆ ಸಂಘದ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಸೋಮೇಶ್ವರ ದೇವಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಪಲ್ಲಕಿಗಳ ಮೆರವಣಿಗೆಯಲ್ಲಿ ಡೊಳ್ಳು ಕುಣೆತ, ವೀರಗಾಸೆ, ಕೀಲು ಕುದರೆ (ತಂಜಾವೂರು) ಇನ್ನೂ ಮುಂತಾದ ಸಾಂಸ್ಕೃತಿಕ ತಂಡಗಳು ಮನೋರಂಜನೆಯನ್ನು ನೀಡಿದವು.

ಪಟ್ಟಣದ ಕುರುಬರ ಪೇಟೆ ರೈತ ಯುವಕರ ಸಂಘದ ಅಧ್ಯಕ್ಷ ಹಾಲು ಮುನಿಕೃಷ್ಣಪ್ಪ (ಮೀಸೆ) ಅವರ ನೇತೃತ್ವದಲ್ಲಿ ಗ್ರಾಮಸ್ಥರೆಲ್ಲರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

 

 

 

 

 

ಪ್ರತಿಕ್ರಿಯಿಸಿ (+)