ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೇಕ್ವಾಂಡೊ: ಜಿಲ್ಲೆಗೆ ಅಗ್ರ ಸ್ಥಾನ

ಧಾರವಾಡ ಸಂಸ್ಥೆಗೆ ದ್ವಿತೀಯ; ತುಮಕೂರು ತಂಡಕ್ಕೆ ತೃತೀಯ ಬಹುಮಾನ
Last Updated 25 ಜನವರಿ 2023, 5:51 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಕರ್ನಾಟಕ ಟೇಕ್ವಾಂಡೊ ಸಂಸ್ಥೆಯಿಂದ ನಗರದ ಆರ್.ಎಲ್. ಜಾಲಪ್ಪ ತಾಂತ್ರಿಕ ವಿದ್ಯಾಲಯದ ಆವರಣದಲ್ಲಿ ನಡೆದ ರಾಜ್ಯಮಟ್ಟದ ಟೇಕ್ವಾಂಡೊ ಚಾಂಪಿಯನ್‍ಶಿಪ್‌ನ ವಿಭಾಗ ಮಟ್ಟದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಟೇಕ್ವಾಂಡೊ ತಂಡ ಪ್ರಥಮ ಸ್ಥಾನ ಪಡೆದಿದೆ.

ಧಾರವಾಡದ ಟೇಕ್ವಾಂಡೊ ಸಂಸ್ಥೆ ದ್ವಿತೀಯ ಹಾಗೂ ತುಮಕೂರು ವಾರಿಯರ್ಸ್ ಟೇಕ್ವಾಂಡೊ ಅಕಾಡೆಮಿ ತೃತೀಯ ಸ್ಥಾನ ಪಡೆಯಿತು.

‘ಈ ಸ್ಪರ್ಧೆಯಲ್ಲಿ ಆಯ್ಕೆಯಾಗಿ ಚಿನ್ನದ ಪದಕ ಪಡೆದ ಸ್ಪರ್ಧಿಗಳನ್ನು ರಾಷ್ಟ್ರಮಟ್ಟಕ್ಕೆ ಆಯ್ಕೆ ಮಾಡಲಾಗುತ್ತದೆ’ ಎಂದು ರಾಜ್ಯ ಟೇಕ್ವಾಂಡೊ ಕ್ರೀಡಾ ಆಯೋಜಕ ವಿ. ನಾರಾಯಣಸ್ವಾಮಿ ತಿಳಿಸಿದರು.

ಎರಡು ದಿನಗಳ ಕಾಲ ನಡೆದ ಟೇಕ್ವಾಂಡೊ ಚಾಂಪಿಯನ್‍ಶಿಪ್ ಸ್ಪರ್ಧೆಗಳಲ್ಲಿ 39ನೇ ರಾಜ್ಯ ಸಬ್ ಜೂನಿಯರ್‌, ಜೂನಿಯರ್ ಮತ್ತು ಸೀನಿಯರ್ ಕ್ಯೋರೂಗಿ ಟೇಕ್ವಾಂಡೊ ಚಾಂಪಿಯನ್‍ಶಿಪ್, 12ನೇ ಸಬ್ ಜೂನಿಯರ್ಸ್‌, ಜೂನಿಯರ್ ಮತ್ತು ಸೀನಿಯರ್ ಪೂಮ್‍ಸೆ ಟೇಕ್ವಾಂಡೊ ಚಾಂಪಿಯನ್‍ಶಿಪ್ ಹಾಗೂ 8ನೇ ರಾಜ್ಯ ಕೆಡೆಟ್ ಕ್ಯೋರೂಗಿ ಮತ್ತು ಪೂಮ್‍ಸೆ ಟೇಕ್ವಾಂಡೊ ಚಾಂಪಿಯನ್‍ಶಿಪ್ ಸ್ಪರ್ಧೆ ನಡೆದವು ಎಂದು ಸಂಸ್ಥೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎಂ. ಕೃಷ್ಣಮೂರ್ತಿ ಮಾಹಿತಿ ನೀಡಿದರು.

ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಆರ್.ಎಲ್. ಜಾಲಪ್ಪ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಜೆ. ರಾಜೇಂದ್ರ, ಕರ್ನಾಟಕ ಟೇಕ್ವಾಂಡೊ ಸಂಸ್ಥೆ ಅಧ್ಯಕ್ಷ ಟಿ. ಪ್ರವೀಣ್, ಆರ್.ಎಲ್. ಜಾಲಪ್ಪ ತಾಂತ್ರಿಕ ವಿದ್ಯಾಲಯದ ಕ್ರೀಡಾ ನಿರ್ದೇಶಕ ದಾದಾಪೀರ್, ಎಚ್.ಆರ್. ನಾರಾಯಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT