ಆನೇಕಲ್: ತಾಲ್ಲೂಕಿಗೆ ಹೊಂದಿಗೊಂಡಿರುವ ತಮಿಳುನಾಡಿನ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರನ್ನು ಸೆಳೆಯಲು ರಾಜಕೀಯ ನಾಯಕರು ಮತ್ತು ಅಭ್ಯರ್ಥಿಗಳು ಕನ್ನಡ ಮತ್ತು ತೆಲಗಿನಲ್ಲೇ ಮತಯಾಚನೆ ಮಾಡುವ ಮೂಲಕ ಕನ್ನಡಿಗರು ಮತ್ತು ತೆಲುಗು ಮಾತನಾಡುವ ಜನರ ಮತಕ್ಕೆ ಗಾಳ ಹಾಕಿದ್ದಾರೆ.

ಕೃಷ್ಣಗಿರಿ, ಹೊಸೂರು, ಥಳೀ ಕ್ಷೇತ್ರದ ಬಹುತೇಕ ಮಂದಿ ತೆಲುಗು, ತಮಿಳು, ಕನ್ನಡ ಮೂರು ಭಾಷೆ ಮಾತನಾಡುತ್ತಾರೆ. ಮತದಾರರನ್ನು ಸೆಳೆಯಲು ಎಲ್ಲ ಪಕ್ಷದವರು ಭಾಷೆಯನ್ನು ಅಸ್ತ್ರವಾಗಿ ಬಳಸುತ್ತಿವೆ. ಎಲ್ಲ ಪಕ್ಷಗಳವರು ತಾ ಮುಂದು ನಾ ಮುಂದು ಎಂಬಂತೆ ಮುಗಿಬಿದ್ದು ಮತದಾರರನ್ನು ಸೆಳೆಯಲು ಆ ಭಾಗಗಳ ಮಾತೃ ಭಾಷೆಗಳಾದ ಕನ್ನಡ, ತೆಲುಗು ಮೊರೆ ಹೋಗಿದ್ದಾರೆ.

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ತೆಲುಗು ಮತ್ತು ಕನ್ನಡ ಭಾಷೆ ಪ್ರಭಾವ ಹೆಚ್ಚಿದೆ. ಜಿಲ್ಲೆ ವ್ಯಾಪ್ತಿಯಲ್ಲಿ ಆರು ವಿಧಾನಸಭೆ ಕ್ಷೇತ್ರ ಬರುತ್ತದೆ. ಇದರಲ್ಲಿ ಥಳೀ, ಹೊಸೂರು, ಕೃಷ್ಣಗಿರಿ ಮತ್ತು ವೇಪನಹಳ್ಳಿಯಲ್ಲಿ ಶೇ60ಕ್ಕಿಂತ ಹೆಚ್ಚು ಜನ ಕನ್ನಡ ಮತ್ತು ತೆಲುಗು ಮಾತನಾಡುತ್ತಾರೆ. ಮತದಾರರನ್ನು ಸೆಳೆಯಲು ಭಾಷೆಯೇ ಅಸ್ತ್ರವಾಗಿ ಬಳಸಲಾಗುತ್ತಿದೆ.

ಹೀಗಾಗಿ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಪ್ರಚಾರ ಸಭೆ ನಡೆಸಿದರು. ಕರ್ನಾಟಕದ ರಾಜಕಾರಣಿಗಳು, ಆಂಧ್ರಪ್ರದೇಶದ ರಾಜಕಾರಣಿಗಳು ಈ ಪ್ರದೇಶದಲ್ಲಿ ಕನ್ನಡ ಮತ್ತು ತೆಲಗಿನಲ್ಲಿ ಪ್ರಚಾರ ಮತ್ತು ಮತಯಾಚಿಸಿದರು.

ತಮಿಳುನಾಡಿನ ಥಳೀ, ಕೃಷ್ಣಗಿರಿ, ಉತ್ತಂಗರೈ, ಹೊಸೂರು, ವೇಪನಪಲ್ಲಿ ವಿಧಾನಸಭಾ ಕ್ಷೇತ್ರಗಳಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಬಿ.ಶಿವಣ್ಣ, ಮಾಲೂರು ಶಾಸಕ ಕೆ.ವೈ. ನಂಜೇಗೌಡ, ವಿಧಾನ ಪರಿಷತ್ ಸದಸ್ಯ ರಾಮೋಜಿಗೌಡ, ಬಮೂಲ್ ನಿರ್ದೇಶಕ ಆರ್.ಕೆ.ರಮೇಶ್, ಕೆಪಿಸಿಸಿ ಕಾರ್ಯದರ್ಶಿ ಬಾಬುರೆಡ್ಡಿ, ಮುಖಂಡರಾದ ಸೌಮ್ಯರೆಡ್ಡಿ, ಗಟ್ಟಹಳ್ಳಿ ಸೀನಪ್ಪ ಸೇರಿದಂತೆ ಮುಖಂಡರು ಕನ್ನಡದಲ್ಲೇ ಪ್ರಚಾರ ನಡೆಸಿದರು.

ಬಿಜೆಪಿ ಕೂಡ ಇದೇ ರೀತಿಯ ಭಾಷೆ ಅಸ್ತ್ರ ಬಳಸುತ್ತಿದೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ, ಶಾಸಕ ಸತೀಶ್ ರೆಡ್ಡಿ, ಮಾಜಿ ಶಾಸಕ ವೈ.ಸಂಪಂಗಿ ಸೇರಿದಂತೆ ಮುಖಂಡರು ಸ್ಥಳದಲ್ಲಿಯೇ ಮೊಕ್ಕಾಂ ಹೂಡಿ ಪ್ರಚಾರ ನಡೆಸಿದರು.

ಅಭ್ಯರ್ಥಿಗಳ ಬಾಯಲ್ಲೂ ಕನ್ನಡ

ಥಳೀ ವಿಧಾನಸಭಾ ಕ್ಷೇತ್ರದ ಸಿಪಿಐ ಅಭ್ಯರ್ಥಿ ಟಿ.ರಾಮಚಂದ್ರನ್ ಮತ್ತು ಬಿಜೆಪಿ ಅಭ್ಯರ್ಥಿ ಡಾ.ಸಿ.ನಾಗೇಶ್ ಬಹುತೇಕ ಹಳ್ಳಿಗಳಲ್ಲಿ ಕನ್ನಡದಲ್ಲೇ ಪ್ರಚಾರ ಕೈಗೊಂಡರು. ಥಳೀ, ಗುಮ್ಮಳಾಪುರ, ಡೆಂಕಣಿಕೋಟೆ, ಕೆಲಮಂಗಲ ಭಾಗಗಳಲ್ಲಿ ಕನ್ನಡದಲ್ಲೇ ಮತಯಾಚಿಸಿದರು.

‘ಅರ್ಥಮೈಂದಾ ರಾಜ..’

ಥಳೀ ಕ್ಷೇತ್ರದಲ್ಲಿ ತೆಲುಗು ಭಾಷಿಕರು ಹೆಚ್ಚಾಗಿರುವುದರಿಂದ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕ್ಷೇತ್ರಕ್ಕೆ ಆಗಮಿಸಿ ತೆಲುಗು ಭಾಷೆಯಲ್ಲಿ ಪ್ರಚಾರ ನಡೆಸಿದರು. ಭಾಷಣದ ಮಧ್ಯೆ ಚಲನಚಿತ್ರ ಡೈಲಾಗ್ ‘ಅರ್ಥಮೈಂದಿ ರಾಜ’ ಮಾತಿಗೆ ಕೆಲಮಂಗಲದ ಜನರು ಮತ್ತು ಎನ್ಡಿಎ ಕಾರ್ಯಕರ್ತರು ಚಪ್ಪಾಳೆ, ಶಿಳ್ಳೆ ಹಾಕಿ ಖುಷಿಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.