ದೊಡ್ಡಬಳ್ಳಾಪುರ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಎಂಸಿಎಸ್) ಚುನಾವಣೆ ನ.2 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4ವರೆಗೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ)ದಲ್ಲಿ ನಡೆಯಲಿದೆ ಎಂದು ಚುನಾವಣಾ ಅಧಿಕಾರಿ ಆರ್.ರಾಮಾಂಜನೇಯ ಹೇಳಿದರು.

5,571 ಮತದಾರರಿದ್ದು, ಮತದಾನಕ್ಕೆಎಲ್ಲಾ ಸಿದ್ಧತೆ ಅಂತಿಮಗೊಂಡಿವೆ. ಮತದಾನ ಹಾಗೂ ಮತಗಳ ಎಣಿಕೆಗಾಗಿ 80 ಸಿಬ್ಬಂದಿ ನೇಮಿಸಲಾಗಿದೆ. 12 ಕೊಠಡಿಗಳಲ್ಲಿ ಮತದಾನ ನಡೆಯಲಿದೆ. ಪ್ರತಿಯೊಂದು ಕೊಠಡಿಯಲ್ಲೂ 8 ಮತಪೆಟ್ಟಿಗೆಗಳು ಇರಲಿವೆ. ಮತದಾರರು ಟಿಎಪಿಎಂಸಿಎಸ್ ವತಿಯಿಂದ ನೀಡಲಾಗಿರುವ ಭಾವಚಿತ್ರ ಇರುವ ಗುರುತಿನ ಚೀಟಿಯನ್ನು ತೋರಿಸುವ ಮೂಲಕ ಮತದಾನ ಮಾಡಬಹುದಾಗಿದೆ. ಸಂಜೆ 4 ಗಂಟೆಗೆ ಮತದಾನ ಮುಕ್ತಾಯವಾದ ನಂತರ ಮತಗಳ ಎಣಿಕೆ ನಡೆಯಲಿದೆ. ಸುಗಮ ಮತದಾನಕ್ಕಾಗಿ ಪೊಲೀಸ್ ಬಂದೋಬಸ್ತ್ ಸಹ ಏರ್ಪಡಿಸಲಾಗಿದೆ ಎಂದರು.

ಅಂತಿಮ ಚುನಾವಣಾ ಕಣದಲ್ಲಿ ‘ಎ’ ತರಗತಿಯ 5 ನಿರ್ದೇಶಕ ಸ್ಥಾನಗಳಿಂದ 9 ಜನ, ‘ಬಿ’ ತರಗತಿಯ 8 ನಿರ್ದೇಶಕ ಸ್ಥಾನಗಳಿಗೆ 19 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ‘ಎ’ ತರಗತಿಯಲ್ಲಿ 20 ಜನ ಮತದಾರರು ಇದ್ದು ಒಬ್ಬರು 5 ಜನ ನಿರ್ದೆಶಕರನ್ನು ಆಯ್ಕೆಮಾಡಬೇಕು. ‘ಬಿ’ ತರಗತಿಯಲ್ಲಿ 5,571 ಜನ ಮತದಾರರು ಇದ್ದು, ಒಬ್ಬರು 8 ನಿರ್ದೆಶಕರನ್ನು ಆಯ್ಕೆ ಮಾಡಬೇಕಿದೆ.

ಎ ಮತ್ತು ಬಿ ತರಗತಿಯ ಎಲ್ಲಾ 13 ಸ್ಥಾನಗಳಿಗೂ ಕಾಂಗ್ರೆಸ್ ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯೊಂದಿಗೆ ಎಲ್ಲಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.