ಮಕ್ಕಳಿಗೆ ವಸ್ತುಗಳ ಮೂಲಕ ಕಲಿಸಿ

7

ಮಕ್ಕಳಿಗೆ ವಸ್ತುಗಳ ಮೂಲಕ ಕಲಿಸಿ

Published:
Updated:
Prajavani

ದೊಡ್ಡಬಳ್ಳಾಪುರ: ’ಮಕ್ಕಳಿಗೆ ಪೂರ್ವ ಪ್ರಾಥಮಿಕ ಹಂತದಲ್ಲಿ ಅಕ್ಷರ ಕಲಿಸುವುದಕ್ಕಿಂತಲೂ ಪ್ರಾಯೋಗಿಕವಾಗಿ ಅಭ್ಯಾಸ ಮಾಡುವುದು ಅತ್ಯುತ್ತಮ ಕಲಿಕಾ ವಿಧಾನವಾಗಿದೆ‘ ಎಂದು ಶ್ರೀಸಾಯಿ ಸಾಧನ ಶಾಲೆಯ ಮುಖ್ಯ ಶಿಕ್ಷಕಿ ಮಧು ಹೇಳಿದರು.

ಕೊಡಿಗೇಹಳ್ಳಿ ಸಮೀಪದ ಶ್ರೀಸಾಯಿ ಸಾಧನ ಶಾಲೆಯಲ್ಲಿ ನಡೆದ ಪೂರ್ವ ಪ್ರಾಥಮಿಕ ಶಾಲೆಯ ಕಲಿಕಾ ವಸ್ತುಗಳ ಪ್ರದರ್ಶನದಲ್ಲಿ ಮಾತನಾಡಿದರು.

’ಪೋಷಕರೂ ಕಲಿಕಾ ವಸ್ತುಗಳ ಪ್ರದರ್ಶನದಲ್ಲಿ ಭಾಗವಹಿಸಬೇಕು. ಇದರಿಂದ ಮನೆಯಲ್ಲಿನ ವಸ್ತುಗಳನ್ನು ಮಕ್ಕಳಿಗೆ ಹೇಗೆ ಪರಿಚಯಿಸಬೇಕು ಎಂಬುದು ತಿಳಿಯುತ್ತದೆ. ಮಕ್ಕಳು ಶಾಲೆಯಲ್ಲಿ ಇರುವುದಕ್ಕಿಂತ ಹೆಚ್ಚಿನ ಸಮಯ ಪೋಷಕರೊಂದಿಗೆ ಕಳೆಯುತ್ತಾರೆ. ಹಾಗಾಗಿ ತಮ್ಮ ಸುತ್ತಲಿನ ಹಾಗೂ ದಿನನಿತ್ಯ ಬಳಸುವ ವಸ್ತುಗಳನ್ನು ಪರಿಚಯಿಸುವುದು ಕಲಿಕಾ ದೃಷ್ಟಿ ಮತ್ತು ಬುದ್ಧಿ ಚುರುಕಾಗಲು ಸಹಕಾರಿ‘ ಎಂದರು.

ವಸ್ತು ಪ್ರದರ್ಶನದಲ್ಲಿ ಪೂರ್ವ ಪ್ರಾಥಮಿಕ ಹಂತದ ತರಗತಿಯಲ್ಲಿ ಮಕ್ಕಳಿಗೆ ಪರಿಚಯಿಸುವ ವಸ್ತುಗಳನ್ನು ಪೋಷಕರಿಗೆ ಪರಿಚಯಿಸಲಾಯಿತು.  

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !