ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವನಹಳ್ಳಿ: ದೇವಸ್ಥಾನಕ್ಕೆ ದಲಿತರಿಗೆ ನಿರ್ಬಂಧ

ದೇವನಹಳ್ಳಿ: ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಸಂಧಾನ
Last Updated 22 ನವೆಂಬರ್ 2022, 20:31 IST
ಅಕ್ಷರ ಗಾತ್ರ

ದೇವನಹಳ್ಳಿ: ಕುಂದಾಣ ಹೋಬಳಿ ಶಾನಪ್ಪನಹಳ್ಳಿಯ ಚನ್ನಕೇಶವ ಸ್ವಾಮಿ ದೇಗುಲಕ್ಕೆ ಕಾರ್ತಿಕ ಸೋಮವಾರ ಸಂಜೆ ದೀಪ ಬೆಳಗಲು ಆಗಮಿಸಿದ್ದ ದಲಿತರಿಗೆ ದೇವಾಲಯದ ಪ್ರವೇಶ ನಿರಾಕರಿಸಲಾಗಿದೆ.

ಮುಜರಾಯಿ ಇಲಾಖೆ ವ್ಯಾಪ್ತಿಯ ಒಳಪಡುವ ಚನ್ನಕೇಶವ ದೇಗುಲಕ್ಕೆ ತೆರಳಿದ್ದ ಪಕ್ಕದ ಸೋಲೂರಿನ ದಲಿತ ಯುವಕರನ್ನು ಅದೇ ಗ್ರಾಮದ ಒಕ್ಕಲಿಗ ಸಮುದಾಯದ ಮಹಿಳೆಯರು ಹಾಗೂ ಮುಖಂಡರು ದೇಗುಲದೊಳಗೆ ಪ್ರವೇಶಿಸದಂತೆ ತಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸ್ಥಳೀಯ ಮುಖಂಡರು ತಹಶೀಲ್ದಾರ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪೊಲೀಸರು ಸ್ಥಳಕ್ಕೆ ತೆರಳಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ತಹಶೀಲ್ದಾರ್‌ ಶಿವರಾಜ್‌, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎಚ್‌.ಡಿ. ವಸಂತ್‌ ಕುಮಾರ್‌ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉಮಾಪತಿ ನೇತೃತ್ವದ ತಂಡ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಿತು.

‘ದಲಿತರೆಂಬ ಕಾರಣಕ್ಕೆಯಾವುದೇ ದೇಗುಲಕ್ಕೆ ಪ್ರವೇಶ ನಿಷೇಧಿಸಬಾರದು. ಶಾಂತಿ ಭಂಗವಾಗುವಂತೆ ವರ್ತಿಸಿದರೆ ಕಾನೂನು ಕ್ರಮಕ್ಕೆ ಮುಂದಾಗುತ್ತೇವೆ. ಸೌಹಾರ್ದಯುತವಾಗಿ ಎಲ್ಲರೂ ಬಾಳಬೇಕು’ ಎಂದು ಅಧಿಕಾರಿಗಳು ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT