ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌ ಬಾಲ್‌ ಕ್ರಿಕೆಟ್‌ ಟೂರ್ನಿ

Last Updated 15 ಮಾರ್ಚ್ 2023, 5:01 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಕ್ರೀಡೆ ಮಾತ್ರವಲ್ಲದೆ ಎಲ್ಲಾ ರಂಗದಲ್ಲೂ ಸೋಲು-ಗೆಲುವು ಅನಿವಾರ್ಯ. ಸೋಲನ್ನು ಸ್ವೀಕರಿಸಿ ಮುಂದೆ ಅದನ್ನು ಗೆಲುವಾಗಿ ಪರಿವರ್ತಿಸಬೇಕು. ಕ್ರೀಡಾ ಮನೋಭಾವದಿಂದ ಆಡಿದಾಗ ಮುಂದೆ ಗೆಲುವು ಸಿಗಲಿದೆ’ ಎಂದು ಮಾತಂಗ ಫೌಂಡೇಷನ್‌ ರಾಜ್ಯ ಉಪಾಧ್ಯಕ್ಷ ಹೊಸಕೋಟೆ ಸುಬ್ಬರಾಜು ತಿಳಿಸಿದರು.

ಪಟ್ಟಣದ ಪದವಿಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ ಆಯೋಜಿಸಿದ್ದ ಎರಡು ದಿನಗಳ ಟೆನಿಸ್‌ ಬಾಲ್‌ ಕ್ರಿಕೆಟ್‌ ಟೂರ್ನಿಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಐಪಿಎಲ್‌ ಮಾದರಿಯಲ್ಲಿ ಟೂರ್ನಿ ಆಯೋಜಿಸಿರುವ ಎಂಸಿಸಿ ಸೇವಾ ಸಂಸ್ಥೆಯ ಕಾರ್ಯವೈಖರಿಯನ್ನು ಮೆಚ್ಚಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸಹಕಾರ ನೀಡಿದ ಎಲ್ಲಾ ತಂಡಗಳಿಗೆ ಅಭಿನಂದನೆ ಸಲ್ಲಬೇಕು ಎಂದು
ತಿಳಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ಎಂ. ಮೂರ್ತಿ ಮಾತನಾಡಿದರು. ಸ್ಥಾಯಿಸಮಿತಿ ಮಾಜಿ ಅಧ್ಯಕ್ಷ ಹನುಮಂತಪ್ಪ, ಜೆಡಿಎಸ್‌ ಮುಖಂಡ ಶ್ರೀನಿವಾಸ್, ಅರುಂಧತಿ ಸೇವಾ ಸಂಸ್ಥೆ ಸಂಸ್ಥಾಪಕ ಮಂಜುನಾಥ್, ಜಾಲಿಗೆ ಗ್ರಾ.ಪಂ. ಸದಸ್ಯ ಸಿಂಗ್ರಹಳ್ಳಿ ಆನಂದ್‌ಕುಮಾರ್, ಸೋಲೂರು ನಾಗರಾಜ್, ಶ್ರೀನಿವಾಸ್, ದಿಲೀಪ್, ಕುಮಾರ್‌, ಎಂಸಿಸಿ ಕ್ರಿಕೆಟ್‌ ತಂಡದ ನಾಯಕ ಮುರಳಿಕೃಷ್ಣ, ಜೈಭೀಮ್‌ ತಂಡದ ನಾಯಕ ನರಸಿಂಹಮೂರ್ತಿ, ಎಂಸಿಸಿ ಕ್ರಿಕೆಟ್‌ ಕ್ಲಬ್‌ ಪದಾಧಿಕಾರಿಗಳಾದ ಕೃಷ್ಣಮೂರ್ತಿ, ವೆಂಕಟೇಶ್, ಬಂಗಾರಿ, ಆನಂದ್‌ ಡಿ. ಶಶಿಧರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT