ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧನ ಚಿಂತನೆಗಳ ಆಚರಣೆ ಅವಶ್ಯಕ

Last Updated 1 ಏಪ್ರಿಲ್ 2021, 7:30 IST
ಅಕ್ಷರ ಗಾತ್ರ

ಆನೇಕಲ್: ಬುದ್ಧನ ಚಿಂತನೆಗಳನ್ನು ಆಚರಣೆಯಲ್ಲಿ ತರಬೇಕು. ಧಮ್ಮದ ಆಚರಣೆಯಿಲ್ಲದೇ ಅಭಿವೃದ್ಧಿ ಸಾಧ್ಯವಿಲ್ಲ. ಹಾಗಾಗಿ ಪ್ರತಿಯೊಬ್ಬರು ಧಮ್ಮವನ್ನು ಸ್ವೀಕರಿಸಿದರು ಎಂದು ಕೊಳ್ಳೇಗಾಲ ಜೀತವನ ಬುದ್ಧ ವಿಹಾರದ ಸುಖತ್‌ಪಾಲ್‌ ಬಂತೇಜಿ ತಿಳಿಸಿದರು.

ತಾಲ್ಲೂಕಿನ ತ್ಯಾವಕನಹಳ್ಳಿ ಅಶೋಕ ನಗರದಲ್ಲಿ ವಿಶ್ವ ಶಾಂತಿ ಮಹಾಬೋಧಿ ಬುದ್ಧ ವಿಹಾರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಬುದ್ಧ ಶಾಂತಿ, ಕರುಣೆ, ಸಮಾನತೆಯನ್ನು ಬೋಧಿಸಿದರು. ಬುದ್ಧನ ಚಿಂತನೆಗಳನ್ನು 60ಕ್ಕೂ ಹೆಚ್ಚು ದೇಶಗಳು ಅಳವಡಿಸಿಕೊಂಡಿವೆ. ಆದರೆ ಬುದ್ಧನ ನಾಡು ಭಾರತದಲ್ಲಿ ಬೌದ್ಧ ಧರ್ಮ ನೇಪಥ್ಯಕ್ಕೆ ಸರಿಯುತ್ತಿದೆ. ಹಾಗಾಗಿ ಪ್ರತಿಯೊಬ್ಬರು ಬುದ್ಧನ ಚಿಂತನೆಗಳನ್ನು ಪ್ರಚಾರ ಮಾಡಿ ಧಮ್ಮದ ಬಗ್ಗೆ ಅಭಿಮಾನ ಬೆಳೆಯುವಂತೆ ಮಾಡಬೇಕಾಗಿದೆ ಎಂದು
ಹೇಳಿದರು.

ಶಾಸಕ ಬಿ. ಶಿವಣ್ಣ ಮಾತನಾಡಿ, ಅಂಬೇಡ್ಕರ್‌ ಅವರು ಬೌದ್ಧ ಧರ್ಮ ಸ್ವೀಕರಿಸಿ ಸಮಸಮಾಜವನ್ನು ಸ್ಥಾಪಿಸಲು ನಿರಂತರ ಪ್ರಯತ್ನಗಳನ್ನು ನಡೆಸಿದ ಫಲವಾಗಿ ಶೋಷಿತರು, ದೀನದಲಿತರು ಮುಖ್ಯವಾಹಿನಿಗೆ ಬರುವಂತಾಯಿತು. ಅವರ ಶ್ರಮವನ್ನು ಎಂದೂ ಮರೆಯಬಾರದು. ತಮ್ಮ ಕೈಲಾದ ಸಹಾಯ ಮಾಡಿ ನೆರವಾಗುವ ಮೂಲಕ ಸಮಸಮಾಜದ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದರು.

ನಿವೃತ್ತ ತಹಶೀಲ್ದಾರ್‌ ಸಿ. ಮಹಾದೇವಯ್ಯ ಮಾತನಾಡಿದರು. ‘ಜನರ ನಡಿಗೆ ಬುದ್ಧನ ಕಡೆಗೆ’ ಎಂಬ ನಾಟಕವನ್ನು ಎಸ್‌.ಎ.ಎಲ್‌.ಲಲಿತಾ ಕಲಾ ತಂಡದವರು ಪ್ರದರ್ಶಿಸಿದರು. ಗುಲ್ಬರ್ಗದ ಬುದ್ಧ ವಿಹಾರದ ವರಜ್ಯೋತಿ ಬಂತೇಜಿ, ದೇವನಹಳ್ಳಿ ಅಶೋಕ ವಿಹಾರದ ಅನಿರುದ್ಧ ಬಂತೇಜಿ, ಉಪಾಸಕ ದೇವೆಂದ್ರ ಹೆಗ್ಗಡೆ, ವಿಶ್ವ ಶಾಂತಿ ಮಹಾಬೋಧಿ ಬುದ್ಧ ವಿಹಾರ ಟ್ರಸ್ಟ್‌ನ ಸಂಸ್ಥಾಪಕ ಮಾವಳ್ಳಿ ಶಂಕರ್‌, ಅಧ್ಯಕ್ಷ ಡಾ.ಶ್ರೀನಿವಾಸ್, ಉಪಾಧ್ಯಕ್ಷ ಎಂ. ಮುನಿಯಲಪ್ಪ, ಪ್ರಧಾನ ಕಾರ್ಯದರ್ಶಿ ಎಂ. ಗೋವಿಂದರಾಜು, ಬಿಎಸ್‌ಪಿ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ, ಮುಖಂಡರಾದ ಪಟಾಪಟ್ ನಾಗರಾಜು, ಎಂ.ಸಿ. ಹಳ್ಳಿ ವೇಣು, ಚಿನ್ನಪ್ಪ ವೈ. ಚಿಕ್ಕಹಾಗಡೆ, ಸರ್ಜಾಪುರ ಶ್ರೀರಾಮ್, ಮುನಿರಾಜು, ಸಿ.ಕೆ. ರಾಮು, ಶ್ರೀನಿವಾಸ ಕಲ್ಲಹಳ್ಳಿ, ಎಂ. ವೆಂಕಟೇಶ್, ಸಿ. ರಾವಣ, ನಾರಾಯಣಸ್ವಾಮಿ, ವೆಂಕಟೇಶಮೂರ್ತಿ, ಆಂಜಿನಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT