ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆ ಪ್ರಕ್ರಿಯೆ

ಚೀನಾದ ಶಾಂಘೈ ನಗರದಲ್ಲಿ ಸೆ. 2021ಕ್ಕೆ ನಡೆಯುವ ವಿಶ್ವ ಕೌಶಲ ಸ್ಪರ್ಧೆ
Last Updated 9 ಜನವರಿ 2020, 12:32 IST
ಅಕ್ಷರ ಗಾತ್ರ

ದೇವನಹಳ್ಳಿ: ‘ಚೀನಾದ ಶಾಂಘೈ ನಗರದಲ್ಲಿ ಸೆ. 2021ಕ್ಕೆ ನಡೆಯುವ ವಿಶ್ವ ಕೌಶಲ ಸ್ಪರ್ಧೆಯಲ್ಲಿ ಭಾಗವಹಿಸಲು ಜಿಲ್ಲಾ ವಲಯವಾರು ಸ್ಪರ್ಧೆಗಳು ನಡೆಯಲಿದೆ. ಜಿಲ್ಲೆಯ ಪ್ರತಿಭಾವಂತರು ಹೆಚ್ಚಾಗಿ ಭಾಗವಹಿಸಬೇಕು’ ಎಂದು ಅಪರ ಜಿಲ್ಲಾಧಿಕಾರಿ ಜಗದೀಶ್ .ಕೆ.ನಾಯ್ಕ್ ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದದಲ್ಲಿ ಜಿಲ್ಲಾ ಕೌಶಲ ಮಿಷನ್ ವತಿಯಿಂದ ‘ಜಿಲ್ಲಾ ಮಟ್ಟದಲ್ಲಿ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಚಟುವಟಿಕೆಗಳು ಅನುಷ್ಠಾನದ 2019–20ನೇ ಸಾಲಿನ ಜಿಲ್ಲಾ ಕೌಶಲ ಮಿಷನ್ ಸಭೆ’ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ರಾಜ್ಯದಿಂದ 38 ವಿವಿಧ ರೀತಿಯ ಕೌಶಲ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. ಸ್ಪರ್ಧಿಗಳಿಗೆ ಯಾವುದೇ ವಿದ್ಯಾರ್ಹತೆ ಕಡ್ಡಾಯ ಇಲ್ಲ. 1999 ಜ. 1ರ ನಂತರ ಜನಿಸಿದವರಾಗಿರಬೇಕು. ವ್ಯಕ್ತಿಯಲ್ಲಿರುವ ಕೌಶಲವೇ ಸ್ಪರ್ಧೆಗೆ ಅರ್ಹತೆ’ ಎಂದು ಹೇಳಿದರು.

ಜಿಲ್ಲಾ ವಲಯವಾರು ಸರ್ಧೆಯಲ್ಲಿ ಮೊಬೈಲ್ ರೋಬೋಟಿಕ್ಸ್, ಸೈಬರ್ ಸೆಕ್ಯೂರಿಟಿ, ಲ್ಯಾಂಡ್‌ಸ್ಕೇಪ್‌ ಮತ್ತು ಗಾರ್ಡನಿಂಗ್, ಕಾಂಕ್ರೀಟ್ ವರ್ಕ್, ಬ್ಯೂಟಿಥೆರಫಿ, ಕಾರ್‌ಪೆಂಟಿಂಗ್, ಬೇಕರಿ ಉತ್ಪನ್ನಗಳ ತಯಾರಿಕೆ, ಜವಳಿ ಉತ್ಪನ್ನಗಳ ತಯಾರಿಕೆ, ಕೇಶವಿನ್ಯಾಸ, ಆಭರಣ ವಿನ್ಯಾಸ, ಮುದ್ರಣ ಮಾಧ್ಯಮದ ತಂತ್ರಜ್ಞಾನ ಸೇರಿದಂತೆ ಒಟ್ಟು 38 ಸ್ಪರ್ಧೆಗಳನ್ನು ಜಿಲ್ಲಾಮಟ್ಟದಲ್ಲಿ ಆಯೋಜಿಸಲಾಗಿದೆ.

ಸ್ಪರ್ಧಿಗಳು kaushalkar.com - Registration-world skill competition ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಿಕೂಳ್ಳಬಹುದು. ಜ. 15 ಕೊನೆಯ ದಿನ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಕೌಶಲಾಭಿವೃದ್ಧಿ ಕಚೇರಿ, ಬೀರಸಂದ್ರ ಗ್ರಾಮ, ಕೊಯಿರಾ ಅಂಚೆ, ದೇವನಹಳ್ಳಿ ತಾಲ್ಲೂಕು ಇಲ್ಲಿ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ಕೆ.ಎಚ್. ಶಿವರುದ್ರಪ್ಪ, ಜಿಲ್ಲಾ ಕೌಶಲ ಮಿಷನ್ ಅಧಿಕಾರಿ ಭೂಷಣ್ ,ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ, ಹಿಂದುಳಿದ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಭವ್ಯ .ಆರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT