ಪುರಸಭೆ ವ್ಯಾಪ್ತಿಯಲ್ಲಿ ಅವೈಜ್ಞಾನಿಕ ಕಾಮಗಾರಿ: ದೂರು

7

ಪುರಸಭೆ ವ್ಯಾಪ್ತಿಯಲ್ಲಿ ಅವೈಜ್ಞಾನಿಕ ಕಾಮಗಾರಿ: ದೂರು

Published:
Updated:
Prajavani

ದೇವನಹಳ್ಳಿ: ಪುರಸಭೆ ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿ ಅವೈಜ್ಞಾನಿಕವಾಗಿ ಕೂಡಿದೆ ಎಂಬ ಆರೋಪ ಕೇಳಿ ಬಂದಿದೆ.
ರಾಜಕಾಲುವೆ ಕಾಮಗಾರಿ ಹತ್ತಾರು ವರ್ಷಗಳಿಂದ ಸ್ಥಗಿತಗೊಂಡಿದೆ. ಇದರಿಂದ ಚರಂಡಿ ನೀರು ಸರಾಗವಾಗಿ ಹರಿಯದೆ ದುರ್ವಾಸನೆ ಬೀರುತ್ತಿದೆ. ಹಾಗಾಗಿ ಅನೇಕ ರೋಗಳು ಹರಡುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದರು.

ಕೆಲ ವಾರ್ಡ್‌ಗಳಲ್ಲಿ ಗುಣಮಟ್ಟದ ರಸ್ತೆ ಇದ್ದರೂ ಕಿತ್ತುಹಾಕಿ ಮತ್ತೊಮ್ಮೆ ಸಿಮೆಂಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ವಾರ್ಡ್‌ನ ಸದಸ್ಯರು ವಾಸವಿರುವ ಕಡೆ ರಸ್ತೆ, ಸ್ವಚ್ಛತೆ, ಕುಡಿಯುವ ನೀರಿಗೆ ಆದ್ಯತೆ ನೀಡಲಾಗಿದೆ. ಆದರೆ, ವಾರ್ಡ್‌ನ ಕೊನೆ ಭಾಗದಲ್ಲಿರುವ ಹಲವು ಮನೆಗಳಿಗೆ ನೀರು ಸಕಾಲದಲ್ಲಿ ಪೂರೈಕೆಯಾಗುತ್ತಿಲ್ಲ ಎಂದು ಸ್ಥಳೀಯ ನಿವಾಸಿ ಮಾಲಿನಿ ದೂರಿದರು.

ರಾಜಕಾಲುವೆ ತ್ಯಾಜ್ಯ ನೀರೇ ದೊಡ್ಡ ಸಮಸ್ಯೆ ಎಂದು ಅಶ್ವತ್ಥಪ್ಪ ಹಾಗೂ ನವೀನ್ ಕುಮಾರ್‌ ಅವರ ಆರೋಪ. ದೇವನಹಳ್ಳಿ ನಗರ ಪುಟ್ಟಪ್ಪನಗುಡಿ ಬೀದಿ ಚನ್ನರಾಯಪಟ್ಟಣ ರಸ್ತೆ ಬಳಿ ಈ ಹಿಂದೆ ಮಾಡಿರುವ ರಾಜಕಾಲುವೆ ಅವೈಜ್ಞಾನಿಕವಾಗಿದೆ ಎಂದು ಗೋಪಿನಾಥ್ ಮತ್ತು ರಾಮಚಂದ್ರಪ್ಪ ಸಮಸ್ಯೆಗಳತ್ತ ಬೊಟ್ಟು ಮಾಡಿದರು. ಇದಕ್ಕೆ ಸ್ಥಳೀಯರಾದ ಎ.ವಿ.ನಾಗೇಶ್, ಜಿ.ನವೀನ್ ಕುಮಾರ್, ಕೈಲಾಶ್, ಗೋಪಾಲಕೃಷ್ಣಪ್ಪ, ಬಿಕಾರಾಮ್, ವೆಂಕಟೇಶ್, ಮಹೇಶ್, ಎನ್.ಹರೀಶ್ ಧ್ವನಿಗೂಡಿಸಿದರು.

ಪುರಸಭೆ ಸಹಾಯಕ ಎಂಜಿನಿಯರ್ ಗಜೇಂದ್ರ ಮಾತನಾಡಿ, ಪುರಸಭೆಗೆ ಕೊಟ್ಯಂತರ ರೂಪಾಯಿ ಅನುದಾನ ಇಲ್ಲ. ಅಲ್ಪಸ್ವಲ್ಪ ಅನುದಾನದಲ್ಲಿಯೇ ಕಾಮಗಾರಿ ಮುಗಿಯಬೇಕು. ರಾಜಕಾಲುವೆ ಕಾಮಗಾರಿ ಶಿಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !