ಬೆಂಗಳೂರು-ಹಿಂದೂಪುರ ಮಾರ್ಗದಲ್ಲಿ ರೈಲು ಸಂಚಾರ ವ್ಯತ್ಯಯ

ದೊಡ್ಡಬಳ್ಳಾಪುರ: ಗೌರಿಬಿದನೂರು ತಾಲ್ಲೂಕು ದೇವರಪಲ್ಲಿಯಿಂದ ತೊಂಡೇಬಾವಿ ರೈಲು ಮಾರ್ಗದಲ್ಲಿ ರೈಲು ಹಳಿ ನಿರ್ವಹಣೆ ಕಾಮಗಾರಿ ಆರಂಭಿಸಿರುವ ರೈಲ್ವೆ ಇಲಾಖೆ ಕೆಲ ರೈಲುಗಳ ಸಂಚಾರವನ್ನು ರದ್ದುಪಡಿಸಿದೆ.
ದೊಡ್ಡಬಳ್ಳಾಪುರ ರೈಲು ನಿಲ್ದಾಣದ ಸೂಚನಾ ಫಲಕದಲ್ಲಿ ಈ ಕುರಿತು ಮಾಹಿತಿ ಪ್ರಕಟಿಸಲಾಗಿದೆ. ಡಿ.13ರಿಂದ 15ರವರೆಗೆ ಬೆಂಗಳೂರು-ವಿಜಯವಾಡ (ರೈಲು ಸಂಖ್ಯೆ 56503/4), ಬೆಂಗಳೂರು-ಹಿಂದೂಪುರ (ರೈಲು ಸಂಖ್ಯೆ 66523/4) ಪ್ಯಾಸೆಂಜರ್‌ಗಳು ಸಂಚರಿಸುವುದಿಲ್ಲ. ಯಶವಂತಪುರ-ಕಾಚಿಗುಡ (ರೈಲು ಸಂಖ್ಯೆ 16569/70), ಯಶವಂತಪುರ-ಮಚಲಿಪಟ್ಟಣಂ (ರೈಲು ಸಂಖ್ಯೆ 17212/13) ಎಕ್ಸ್‌ಪ್ರೆಸ್ ರೈಲುಗಳನ್ನೂ ರದ್ದುಪಡಿಸಲಾಗಿದೆ.
ಡಿ.13ರಿಂದ 15ರವರೆಗೆ ಬೆಂಗಳೂರು-ಹಿಂದೂಪುರ ಪ್ಯಾಸೆಂಜರ್‌ನ ವೇಳಾಪಟ್ಟಿಗೆ ಅನುಗುಣವಾಗಿ ಮೈಸೂರು-ಬಾಗಲಕೋಟೆ ನಡುವೆ ಸಂಚರಿಸುವ ಬಸವ ಎಕ್ಸ್‌ಪ್ರೆಸ್‌ನ (ರೈಲು ಸಂಖ್ಯೆ 17307) ವೇಳಾಪಟ್ಟಿಯನ್ನು ಬದಲಿಸಲಾಗಿದೆ.
ಹಿಂದೂಪುರ-ಬೆಂಗಳೂರು ಮಾರ್ಗದ ಎಲ್ಲ ನಿಲ್ದಾಣದಲ್ಲೂ ಈ ಮೂರೂ ದಿನ ಬಸವ ಎಕ್ಸ್‌ಪ್ರೆಸ್ ನಿಲ್ಲುತ್ತದೆ. ಪ್ಯಾಸೆಂಜರ್ ಪಾಸ್‌ಗಳನ್ನು ಹೊಂದಿರುವರು ಬಸವ ಎಕ್ಸ್‌ಪ್ರೆಸ್‌ನಲ್ಲಿ ಸಂಚರಿಸಬಹುದು. ಆದರೆ, ಟಿಕೆಟ್ ಖರೀದಿಸುವ ಪ್ರಯಾಣಿಕರು ಪ್ಯಾಸೆಂಜರ್ ಟಿಕೆಟ್‌ಗಳ ಬದಲು, ದುಬಾರಿ ಬೆಲೆ ತೆತ್ತು ಎಕ್ಸ್‌ಪ್ರೆಸ್ ಟಿಕೆಟ್‌ಗಳನ್ನೇ ಖರೀದಿಸಬೇಕಾಗುತ್ತದೆ. ಹಿಂದೂಪುರ ಪ್ಯಾಸೆಂಜರ್ ಸಂಚಾರ ರದ್ದಾಗಿರುವ ಮೂರೂ ದಿನ ಮುಂಬೈ-ಬೆಂಗಳೂರು ನಡುವೆ ಸಂಚರಿಸುವ ಉದ್ಯಾನ್ ಎಕ್ಸ್‌ಪ್ರೆಸ್ ಸಹ ಭರ್ತಿಯಾಗಿ ಸಂಚರಿಸುವ ಸಾಧ್ಯತೆ ಇದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.