ಸೋಮವಾರ, ಅಕ್ಟೋಬರ್ 21, 2019
24 °C

ಹೊಸಕೋಟೆ-ಜಂಗಮಕೋಟೆ ಹೆದ್ದಾರಿಯಲ್ಲಿ ಕಸದ ರಾಶಿ

Published:
Updated:
Prajavani

ಸೂಲಿಬೆಲೆ: ಸಮೀಪದ ಹೊಸಕೋಟೆ- ಜಂಗಮಕೋಟೆ ರಸ್ತೆ ಬದಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಪೇಪರ್, ಕೈಗಾರಿಕೆಗಳ ತ್ಯಾಜ್ಯದ ವಸ್ತುಗಳು ಹೇರಳವಾಗಿ ಸುರಿದಿದ್ದು ರಸ್ತೆಯುದ್ದಕ್ಕೂ ಕಸದ ರಾಶಿಗಳು ಅಲ್ಲಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿವೆ.

ದೇಶದಾದ್ಯಂತ 150 ನೇ ಗಾಂಧಿ ಜಯಂತಿಯನ್ನು ಸ್ವಚ್ಛತಾ ದಿವಸವನ್ನಾಗಿ ಆಚರಿಸಲಾಗಿದ್ದು, ಪ್ಲಾಸ್ಟಿಕ್ ಮುಕ್ತ ಸ್ವಚ್ಛ ಭಾರತದ ಕಲ್ಪನೆಯನ್ನು ಕೇಂದ್ರ ಸರ್ಕಾರ ದೇಶದ ಮುಂದಿಟ್ಟಿರುವ ಸಂದರ್ಭದಲ್ಲಿಯೇ ಹಲವಾರು ಕಡೆ ಕಸ ಮತ್ತು ಪ್ಲಾಸ್ಟಿಕ್ ಸಮಸ್ಯೆ ತಾಂಡವವಾಡುತ್ತಿರುವುದು ಹೊಸಕೋಟೆ-ಜಂಗಮಕೋಟೆ ಹೆದ್ದಾರಿಯ ಬದಿಯಲ್ಲಿ ಕಾಣುತ್ತಿದೆ.

ಪ್ಲಾಸ್ಟಿಕ್ ಹಾಗೂ ಕಸ ಮುಕ್ತ ಕಲ್ಪನೆ ಈ ಭಾಗದಲ್ಲಿ ಕಡತಕ್ಕೆ ಸಿಮೀತವಾಗಿರುವುದು ಕಂಡುಬರುತ್ತಿದೆ ಎಂದು ಸ್ಥಳೀಯರೊಬ್ಬರು ದೂರಿದ್ದಾರೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)