ತೂಬಗೆರೆ ಎಂಪಿಸಿಎಸ್‌ ₹21 ಲಕ್ಷ ಲಾಭ

7
ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಬಮೂಲ್‌ ನಿರ್ದೇಶಕ ಎಚ್‌.ಅಪ್ಪಯ್ಯ

ತೂಬಗೆರೆ ಎಂಪಿಸಿಎಸ್‌ ₹21 ಲಕ್ಷ ಲಾಭ

Published:
Updated:
Deccan Herald

ತೂಬಗೆರೆ (ದೊಡ್ಡಬಳ್ಳಾಪುರ): ತೂಬಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ 2017–18ನೇ ಸಾಲಿನಲ್ಲಿ ₹21ಲಕ್ಷ ಲಾಭಗಳಿಸಿದೆ. ಸಂಘವು ತಾಲ್ಲೂಕಿನಲ್ಲೇ ಲಾಭ ಪಡೆಯುವಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಬಮೂಲ್‌ ನಿರ್ದೇಶಕ ಎಚ್‌.ಅಪ್ಪಯ್ಯ
ಹೇಳಿದರು.

ಅವರು ತಾಲ್ಲೂಕಿನ ತೂಬಗೆರೆಯಲ್ಲಿ ಮಂಗಳವಾರ ನಡೆದ ಹಾಲು ಉತ್ಪಾದಕರ ಸಹಕಾರ ಸಂಘದ 2018ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ
ಮಾತನಾಡಿದರು.

ಸಂಘದ ಲಾಭದ ಹಣದಲ್ಲಿ ತೂಬಗೆರೆ ಎಂಪಿಸಿಎಸ್‌ ವ್ಯಾಪ್ತಿಗೆ ಒಳಪಡುವ ನಾಲ್ಕು ಗ್ರಾಮಗಳಿಗೆ ತಲಾ ₹1ಲಕ್ಷ ನೀಡಬೇಕು. ಇದರೊಂದಿಗೆ ಬಮೂಲ್‌ನಿಂದಲು ಹಣ ನೀಡಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿಕೊಡಲಾಗುವುದು. ಇದಕ್ಕೆ
ಅಗತ್ಯ ಇರುವ ಸ್ಥಳವನ್ನು ಗ್ರಾಮದ ಪಂಚಾಯಿತಿ ಸದಸ್ಯರು ಗುರುತಿಸಿ ಕೊಡಬೇಕು. ರಾಸುಗಳಿಗೆ ಕೃತಕ ಗರ್ಭಧಾರಣೆ ಮಾಡಲು ತರಬೇತಿಯನ್ನು ನೀಡಲಾಗುವುದು ಎಂದರು.

ಮಳೆಗಾಲದಲ್ಲಿ ಹಾಲಿನ ಬೆಲೆ ಇಳಿಕೆಯಾಗಿದೆ. ಆದರೆ ಕನಕಪುರದ ಸಮೀಪ ನಿರ್ಮಿಸಲಾಗಿರುವ ಬೃಹತ್‌ ಡೈರಿ ಇನ್ನು ಮೂರು ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ. ಇದಾದ ನಂತರ ಎಷ್ಟೇ ಪ್ರಮಾಣದಲ್ಲಿ ಹಾಲು ಉತ್ಪಾದನೆಯಾದರೂ ಬೆಲೆ ಕಡಿಮೆ ಮಾಡದೆ ರೈತರಿಂದ ಹಾಲು ಖರೀದಿಸಲಾಗುವುದು ಎಂದರು.

ಸಭೆಯಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ್‌, ತೂಬಗೆರೆ ಗ್ರಾಮದಲ್ಲಿ ಸರ್ಕಾರದ ವಿವಿಧ ಯೋಜನೆಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳ ಗುಣಮಟ್ಟ ಕಳಪೆಯಾಗಿದೆ.
ಈ ಬಗ್ಗೆ ಹಲವಾರು ಬಾರಿ ಎಂಜಿನಿಯರ್‌ಗಳ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಭೆಯಲ್ಲಿದ್ದ ಶಾಸಕರ ಗಮನಕ್ಕೆ ತಂದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಹಾಲು ಉತ್ಪಾದನೆ ಗ್ರಾಮೀಣ ಭಾಗದ ಜನರ ಆರ್ಥಿಕ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ರೈತರ ಏಳಿಗೆಗಾಗಿ ಸ್ಥಾಪಿತವಾಗಿರುವ ಸಹಕಾರಿ ಸಂಸ್ಥೆಗಳನ್ನು ಬೆಳೆಸಿಕೊಂಡು ಹೋಗುವ ಜವಾಬ್ದಾರಿ ರೈತರ ಮೇಲಿದೆ ಎಂದರು.

ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷೆ ಚಿಕ್ಕಪ್ಪಯ್ಯ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಮೋಹನ್‌ಕುಮಾರ್‌, ತೂಬಗೆರೆ ಹೋಬಳಿ ಘಟಕದ ಜೆಡಿಎಸ್‌ ಅಧ್ಯಕ್ಷ ದೇವರಾಜು, ರಾಜ್ಯ ಸಂಘಟನ ಕಾರ್ಯದರ್ಶಿ ಎ.ನರಸಿಂಹಯ್ಯ, ಯುವ ಜೆಡಿಎಸ್‌ ಮುಖಂಡ ಗೌರೀಶ್‌,
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್‌.ಅರವಿಂದ್‌, ಕೆಪಿಸಿಸಿ ಸದಸ್ಯ ಎಸ್‌.ಆರ್‌.ಮುನಿರಾಜು, ಸಂಘದ ಕಾರ್ಯನಿರ್ವಾಕ ಟಿ.ವಿ.ಶ್ರೀನಿವಾಸ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !