ಕ್ಷಯ: ತಪಾಸಣೆಗೆ ಮುಜಗರ ಬೇಡ

7

ಕ್ಷಯ: ತಪಾಸಣೆಗೆ ಮುಜಗರ ಬೇಡ

Published:
Updated:
Prajavani

ವಿಜಯಪುರ: 'ಕ್ಷಯ ಬ್ಯಾಕ್ಟೀರಿಯಾಗಳಿಂದ ಹರಡುವ ರೋಗ. ವಿಟಮಿನ್ 'ಡಿ'ಯಿಂದ ಈ ಕಾಯಿಲೆ ವಾಸಿಯಾಗುತ್ತದೆ. ಇದರ ಬಗ್ಗೆ ಜನರು ಹೆಚ್ಚು ಭಯಪಡುವ ಅವಶ್ಯ ಇಲ್ಲ’ಎಂದು ಡಾ.ಶ್ಯಾಂಸುಂದರ್ ತಿಳಿಸಿದರು.

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ‘ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಈ ಕಾಯಿಲೆಗೆ 6ತಿಂಗಳು ನಿರಂತರವಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಗುಣಮುಖರಾಗಬಹುದು. ಕಫ ಪರೀಕ್ಷೆಯಿಂದ ಈ ರೋಗ ಪತ್ತೆ ಮಾಡಬಹುದಾಗಿದೆ. ಎರಡು ವಾರಗಳಿಗಿಂತಲೂ ಹೆಚ್ಚು ದಿನಗಳ ಕಾಲ ಕೆಮ್ಮು ಇದ್ದರೆ ಕೂಡಲೇ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿ, ಚಿಕಿತ್ಸೆ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಬೇರೆ ರಾಜ್ಯಗಳಿಂದ ಕೆಲಸಕ್ಕೆ ಬಂದ ಕೂಲಿ ಕಾರ್ಮಿಕರು ಹಣವಿಲ್ಲದ ಕಾರಣ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುವುದಿಲ್ಲ. ಆದ್ದರಿಂದ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ‌ ಎಂದು ತಿಳಿಸಿದರು.

ಆಸ್ಪತ್ರೆ ವೈದ್ಯಾಧಿಕಾರಿ ಡಾ.ಮಂಜುಳಾ ಮಾತನಾಡಿ, ’ಕಾಯಿಲೆ ದೇಹದ ಯಾವುದೇ ಭಾಗಗಳಿಗೂ ಹರಡುವ ಸಾಧ್ಯತೆ ಇದೆ. ಇದರ ಬಗ್ಗೆ ಹೇಳಿಕೊಳ್ಳಲು ಜನರಲ್ಲಿ ಮುಜುಗರ ಬೇಡ .ನಿರ್ಭೀತಿಯಿಂದ ಮಾಹಿತಿ ನೀಡಿ. ಕ್ಷಯರೋಗಕ್ಕೆ ಯಾವುದೇ ಖಾಸಗಿ ಆಸ್ಪತ್ರೆ ಅಥವಾ ಮೆಡಿಕಲ್ ಸ್ಟೋರ್‌ಗಳಲ್ಲಿ ಔಷಧ ಸಿಗುವುದಿಲ್ಲ ಎಂದು ಮಾಹಿತಿ ನೀಡಿದರು.

ಪುರಸಭಾ ಸದಸ್ಯ ಎಂ.ಕೇಶವಪ್ಪ ಮಾತನಾಡಿ, ’ಜನರು ವೈದ್ಯರ ಸಲಹೆ ಸೂಚನೆ ಕಡ್ಡಾಯವಾಗಿ ಪಾಲನೆ ಮಾಡುವ ಮೂಲಕ ಕ್ಷಯಮುಕ್ತ ರಾಷ್ಟ್ರ ನಿರ್ಮಾಣಕ್ಕೆ ಸಹಕಾರ ನೀಡಬೇಕು. ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ’ ಎಂದರು.

ಡಾ.ಸುನೀತಾ, ಡಾ.ಮೋಹನ್,ವಿಮಲ,ಸರಸ್ವತಮ್ಮ,ಲೀಲಾವತಿ, ಕುಮಾರಿ, ಮಮತ, ಕಲಾವತಿ, ರೂಪ, ಶಾರದಮ್ಮ, ಕಲಾ, ಸವಿತ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !