ಸೋಮವಾರ, ಏಪ್ರಿಲ್ 12, 2021
26 °C

ಪತ್ತೆಯಾಗದ ಚಾಲಾಕಿ ಕರಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆನೇಕಲ್: ಬನ್ನೇರುಘಟ್ಟದಿಂದ ತಪ್ಪಿಸಿಕೊಂಡು ಬಂದಿದ್ದ ಕರಡಿ ಮಂಗಳವಾರ ತಾಲ್ಲುಕಿನ ಶೆಟ್ಟಿಹಳ್ಳಿ, ತಟ್ನಹಳ್ಳಿಗಳಲ್ಲಿ ಜನರ ಮೇಲೆ ದಾಳಿ ನಡೆಸಿ ಪರಾರಿಯಾಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಕರಡಿಗಾಗಿ ಬುಧವಾರ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಕರಡಿಯ ಕುರುಹುಗಳನ್ನು ಹೊರತುಪಡಿಸಿ ಕರಡಿಯ ಸುಳಿವಿಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಿಗ್ಗೆ ತಾಲ್ಲೂಕಿನ ಆವಡದೇನಹಳ್ಳಿ ಕೆರೆಯ ಬಳಿ ಕರಡಿ ಓಡಾಡಿರುವ ಹೆಜ್ಜೆ ಗುರುತುಗಳು ಕಂಡು ಬಂದವು. ರೈತರೊಬ್ಬರು ಬಾಳೆ ತೋಟದಲ್ಲಿ ಕರಡಿಯನ್ನು ಕಂಡಿದ್ದಾಗಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆವಡದೇನಹಳ್ಳಿ, ಮರಸೂರು ಕೆರೆ, ದೊಡ್ಡಹಾಗಡೆ, ಬ್ಯಾಗಡದೇನಹಳ್ಳಿ ಸುತ್ತಮುತ್ತಲ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಆದರೆ ಸಂಜೆಯವರೆಗೂ ಕರಡಿಯ ಪತ್ತೆಯಾಗಿಲ್ಲ. ಮಂಗಳವಾರದ ದಾಳಿಯಿಂದ ಜನರು ಗಾಬರಿಗೊಂಡಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು