ವಾಜಪೇಯಿ ನೆನಪು ಮೆಲುಕು ಹಾಕಿದ ಗುರುಸ್ವಾಮಿ

7

ವಾಜಪೇಯಿ ನೆನಪು ಮೆಲುಕು ಹಾಕಿದ ಗುರುಸ್ವಾಮಿ

Published:
Updated:
Deccan Herald

ದೇವನಹಳ್ಳಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು 1998ರ ನ.1ರಂದು ತಾಲ್ಲೂಕಿನ ಪೂರ್ಣ ಪ್ರಜ್ಞಾ ವಿಜ್ಞಾನ ಸಂಶೋಧನಾ ಕೇಂದ್ರ ಕಾಲೇಜಿನಲ್ಲಿ ನಡೆದ ಕಟ್ಟಡದ ಅಡಿಗಲ್ಲು ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದರು.

ಈ ಕುರಿತು ನೆನಪು ಮೆಲುಕು ಹಾಕಿದ ಬಿಜೆಪಿ ರಾಷ್ಟ್ರೀಯ ಪರಿಷದ್ ಸದಸ್ಯ ಎ.ಸಿ.ಗುರುಸ್ವಾಮಿ, ಉಡುಪಿ ಅದಮಾರು ಮಠ ಶಿಕ್ಷಣ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ವಾಜಪೇಯಿ ಅವರು ಪಾಲ್ಗೊಂಡಿದ್ದರು. ಅವರ ಜತೆಗೆ ಪಲಿಮಾರು ಮತ್ತು ಅದಿಮಾರು ಮಠದ ಸ್ವಾಮೀಜಿಗಳು ಮಾತ್ರ ಇದ್ದರು. ಕೇಂದ್ರದ ಯಾವ ಸಚಿವರಿಗೂ ಅಹ್ಮಾನವಿರಲಿಲ್ಲ ಎಂದು ತಿಳಿಸಿದರು.

’ನಾನು ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ 1975ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿತ್ತು. ಎಲ್ಲೆಡೆ ರಾಜಕೀಯ ಮುಖಂಡರನ್ನು ಬಂಧಿಸಿ ಜೈಲಿಗೆ ಹಾಕಲಾಗಿತ್ತು. ನಾನು ಬೆಂಗಳೂರಿನ ಸೆಂಟ್ರಲ್ ಜೈಲು ಬಳಿ ವಾಜಪೇಯಿ ಅವರನ್ನು ನೋಡಲೇಬೇಕು ಎಂದು ನಿಶ್ಚಯಿಸಿ ಜೈಲಿನ ಮುಂದೆ ಓಡಾಡುತ್ತಿದ್ದಾಗ ಪೊಲೀಸರು ನನ್ನನ್ನು ಬಂಧಿಸಿ ಅದೇ ಜೈಲಿನಲ್ಲಿ ಇಟ್ಟರು. ಜೈಲಿನಲ್ಲಿ ವಾಜಪೇಯಿ ಅವರನ್ನು ಮಾತನಾಡಿಸಿದೆ. ಹಿಂದಿ ಭಾಷೆ ಆಗ ನನಗೆ ಅರ್ಥ ಆಗುತ್ತಿರಲಿಲ್ಲ. ಚಡಪಡಿಸುತ್ತಿದ್ದ ನನಗೆ ಬೆನ್ನು ತಟ್ಟಿ ಸಮಾಧಾನಪಡಿಸಿದ್ದು ರೋಮಾಂಚನ ಮೂಡಿಸಿತ್ತು. ಅಂದಿನಿಂದಲೇ ಪಕ್ಷ ನಿಷ್ಠೆ ಜತೆಗೆ ವಾಜಪೇಯಿ ಅವರ ಅಭಿಮಾನಿಯಾದೆ. 20 ದಿನಗಳ ಕಾಲ ಅವರೊಂದಿಗೆ ಜೈಲಿನಲಿದ್ದ ನೆನಪುಗಳು ಮನದ ಪಟದಲ್ಲಿ ಉಳಿದಿವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !