ವಿವಿಧ ಪ್ರಕರಣ: 7 ಮಂದಿ ವಶಕ್ಕೆ

ಗುರುವಾರ , ಜೂಲೈ 18, 2019
29 °C

ವಿವಿಧ ಪ್ರಕರಣ: 7 ಮಂದಿ ವಶಕ್ಕೆ

Published:
Updated:
Prajavani

ವಿಜಯಪುರ: ಸಮೀಪದ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 7 ಮಂದಿಯನ್ನು ವಶಕ್ಕೆ ಪಡೆದುಕೊಂಡು ₹ 8.76 ಲಕ್ಷ ಅಂದಾಜು ಬೆಲೆಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದೊಡ್ಡಬಳ್ಳಾಪುರ ಉಪವಿಭಾಗದ ಡಿವೈಎಸ್‌ಪಿ ಆರ್. ಮೋಹನ್‌ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬಂಧಿತರು: ಆಂಧ್ರದ ಅನಂತಪುರ ಜಿಲ್ಲೆಯ ಹಿಂದೂಪುರ ತಾಲ್ಲೂಕು ಲೇಪಾಕ್ಷಿ ಮಂಡಲ ಗೊಂಗಟಪಲ್ಲಿ ಗ್ರಾಮದ ನಿವಾಸಿ ಈಗಿನ ಎಲ್ಲೋಡು ಗ್ರಾಮದ ಸಂದೀಪ್‌ ರೆಡ್ಡಿ ಅಲಿಯಾಸ್ ಕೋತಿ ರೆಡ್ಡಿ ಆಲಿಯಾಸ್ ಪೋತರಾಜ (23) ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕಿನ ನಿಚ್ಚನಬಂಡೆಹಳ್ಳಿಯ ಶ್ರೀನಿವಾಸ ಎನ್.ವಿ. ಅಲಿಯಾಸ್ ಭೀಮ (21), ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಟೌನ್ 3ನೇ ವಾರ್ಡಿನ ಇಂದಿರಾನಗರದ ನಿವಾಸಿ ನವೀನ ಅಲಿಯಾಸ್ ಹೋಟೆಲ್ ನವೀನ (19), ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕಿನ ಉಲ್ಲೋಡು ಹೋಬಳಿ ನಿಚ್ಚನಬಂಡೆಹಳ್ಳಿಯ ರಜನಿಕಾಂತ್ ಅಲಿಯಾಸ್ ಪಿಲ್ಲ (22), ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಟೌನ್ ಕುಂಬಾರಪೇಟೆಯ ಶ್ರೀನಿವಾಸ್ ಅಲಿಯಾಸ್ ಸೀನ (23) ಗುಡಿಬಂಡೆ ಟೌನ್ 2ನೇ ವಾರ್ಡಿನ ಪ್ರದೀಪ್ ಅಲಿಯಾಸ್ ಮಾಚಾರ್ಲಹಳ್ಳಿ (23) ಅಪ್ರಾಪ್ತ ಬಾಲಕನೊಬ್ಬನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗಿದೆ.

ಬಂಧಿತರಿಂದ ಒಂದು ಕಾರು, ಚಿನ್ನದ ಉಂಗುರ, 2 ದ್ವಿಚಕ್ರ ವಾಹನಗಳು, ಮೂರು ಕಬ್ಬಿಣದ ಲಾಂಗುಗಳು, ಒಂದು ಲ್ಯಾಪ್‌ಟಾಪ್, ನಾಲ್ಕು ಮೊಬೈಲ್ ಫೋನ್‌, ಒಂದು ಚಿನ್ನದ ತಾಳಿ, ಒಂದು ಬೆಳ್ಳಿಯ ಚೈನು, ₹ 12,300 ನಗದು ವಶಪಡಿಸಿಕೊಳ್ಳಲಾಗಿದೆ.

ಹಿಂದಿನ ಪೊಲೀಸ್ ಅಧಿಕ್ಷಕ ಶ್ರೀರಾಮ್ ನಿವಾಸ್ ಸೆಪಟ್, ಪೊಲೀಸ್ ಅಧೀಕ್ಷಕ ಟಿ.ಪಿ. ಶಿವಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿ.ಜೆ. ಸಜೀತ್ ಅವರ ಮಾರ್ಗದರ್ಶನದಲ್ಲಿ ಬಂಧಿತರನ್ನು ವಿಚಾರಣೆ ನಡೆಸಲಾಗಿದೆ. ಸಿ.ಪಿ.ಐ. ಡಿ.ಆರ್. ಪ್ರಕಾಶ್, ಪಿ.ಎಸ್.ಐ. ನಂದೀಶ್, ಸಿಬ್ಬಂದಿ ನಾರಾಯಣಸ್ವಾಮಿ, ಚಂದ್ರು, ಹೆಚ್.ಸಿ. ಉಮೇಶ್, ಬಸವರಾಜ್, ಮಧುಕುಮಾರ್, ಅರುಣ್‌ಕುಮಾರ್, ವೈ.ಎನ್.ರಮೇಶ್, ಪ್ರಸನ್ನಕುಮಾರ್, ರವಿ, ನಿಂಗಜ್ಜ, ರಮೇಶ್‌ನಾಯ್ಕ, ಸಾಬಣ್ಣ, ರಮೇಶ್.ಬಿ.ಎಸ್, ರುದ್ರೇಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !