ದಾಬಸ್ ಪೇಟೆ: ನೆಲಮಂಗಲ ತಾಲ್ಲೂಕು, ಸೋಂಪುರ ಹೋಬಳಿಯ ದೇವರ ಹೊಸಹಳ್ಳಿಯ ಭದ್ರಕಾಳಮ್ಮ ಸಮೇತ ವೀರಭದ್ರಸ್ವಾಮಿ ಬ್ರಹ್ಮರಥೋತ್ಸವ ಗುರುವಾರ ಭಕ್ತರ ಸಮ್ಮುಖದಲ್ಲಿ ನೆರವೇರಿತು.

ಮುಂಜಾನೆಯಿಂದ ಮೂಲ ದೇವರಿಗೆ ಶತರುದ್ರಾಭೀಷೇಕ ಹೋಮ ನಡೆಯಿತು. ಮಂಗಳ ವಾದ್ಯಗಳೊಂದಿಗೆ ಹೂವುಗಳಿಂದ ಅಲಂಕೃತ ಉತ್ಸವ ಮೂರ್ತಿಯನ್ನು ಬಣ್ಣ ಬಣ್ಣದ ಬಟ್ಟೆ, ಹೂ, ತಳಿರು ತೋರಣ ಎಳನೀರುಗಳಿಂದ ಸಿಂಗಾರಗೊಂಡಿದ್ದ ರಥದಲ್ಲಿ ಕೂರಿಸಲಾಯಿತು.

ರಥದ ಮುಂಭಾಗ ಹೋಮ ಹವನ ಹಾಗೂ ಪೂಜಾ ಕೈಂಕರ್ಯಗಳು ನಡೆದು, ಮಧ್ಯಾಹ್ನ 1ರಿಂದ 1.30 ಗಂಟೆಯೊಳಗಿನ ಮೂಲ ನಕ್ಷತ್ರ, ಮಿಥುನ ಲಗ್ನದಲ್ಲಿ ರಥವನ್ನು ಎಳೆಯಲಾಯಿತು. ನಾದ ಸ್ವರ, ತಾಳವಾದ್ಯ, ವೀರಗಾಸೆ ಕುಣಿತ ಜಾತ್ರೆಗೆ ಕಳೆಕಟ್ಟಿತು. ರಥಕ್ಕೆ ಭಕ್ತರು ಭಕ್ತಿಭಾವದಿಂದ ಸೂರು ಬಾಳೆಹಣ್ಣು ಹಾಗೂ ಮೆಣಸನ್ನು ಬೀರಿ ತಮ್ಮ ಹರಕೆಯನ್ನು ತೀರಿಸಿದರು.

‘ಯಾವುದಾದರು ಚರ್ಮ ಸಂಬಂಧಿ ರೋಗ ಬಂದರೆ ಮೆಣಸನ್ನು ಅರೆದು ಚರ್ಮದ ಮೇಲೆ ಹಚ್ಚಿದರೆ ವಾಸಿ ಯಾಗುತ್ತದೆ ಹಾಗೂ ಕೆಮ್ಮು, ಕಫ ಬಂದರೆ ಮೆಣಸನ್ನು ಪುಡಿ ಮಾಡಿ ಹಾಲಲ್ಲಿ ಹಾಕಿ ಕುಡಿದರೆ ವಾಸಿಯಾಗುತ್ತದೆ’ ಎಂದು ಭಕ್ತರು ನಂಬಿದ್ದಾರೆ. ಭಕ್ತಾದಿಗಳು ಸುಮಾರು 150ಕ್ಕೂ ಹೆಚ್ಚು ಅರವಂಟಿಕೆಗಳನ್ನು ತೆರೆದು ಬಂದ ಭಕ್ತರಿಗೆ ಪ್ರಸಾದ, ಮಜ್ಜಿಗೆ, ಪಾನಕ, ಹೆಸರುಬೇಳೆ ವಿತರಿಸಿದರು. 67ಕ್ಕೂ ಅಧಿಕ ಕೊಪ್ಪಲುಗಳಲ್ಲಿ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿತ್ತು.

ತಹಶೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್, ಮುಜರಾಯಿ ಇಲಾಖೆ ಸಹಾಯಕ ಆಯುಕ್ತರಾದ ಬಿ.ಜೆ. ಹೇಮಾವತಿ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಂ.ಎನ್. ಬೃಂದಾ, ಕಂದಾಯ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.