ವಿಜಯಪುರ (ದೇವನಹಳ್ಳಿ): ಇಲ್ಲಿನ ನಗರೇಶ್ವರಸ್ವಾಮಿ ಪ್ರಾರ್ಥನಾ ಮಂದಿರದಲ್ಲಿ ವೀರಭದ್ರಸ್ವಾಮಿ ಗೋಷ್ಠಿ, ಅಕ್ಕನ ಬಳಗದ ವತಿಯಿಂದ 130ನೇ `ತಿಂಗಳ ಬೆಳಕು' ಕಾರ್ಯಕ್ರಮ ನಡೆಯಿತು.

ಶಿವ ಪರಮಾತ್ಮನು ನಿರಾಕಾರ ಸ್ವರೂಪಿಯಾಗಿದ್ದು, ಆತನನ್ನು ನಿಶ್ಚಲ ಮನಸ್ಸಿನಿಂದ ನೆನೆದರೆ ಜೀವನದಲ್ಲಿ ಭಯವಿರುವುದಿಲ್ಲ. ಶಿವನು ಭಕ್ತರ ಸದಾಶಯಗಳನ್ನು ಈಡೇರಿಸುವ ಕರುಣಾಮಯಿ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಪ್ರಚಾರಕಿ ಶಿವಮಣಿ ಅಕ್ಕ ತಿಳಿಸಿದರು.

12ನೇ ಶತಮಾನದ ಶಿವಶರಣರು ಆತ್ಮ ಮತ್ತು ಪರಮಾತ್ಮನ ಅವಿನಾಭಾವ ಸಂಬಂಧವನ್ನು ತಮ್ಮ ವಚನಗಳ ಮೂಲಕ ಜಗತ್ತಿಗೆ ಸಾರಿದ್ದಾರೆ. ವಿಜಯಪುರದ ಜನತೆ ಶಿವಶರಣರ ಭಕ್ತಿ ಮಾರ್ಗವನ್ನು ಇಂದಿಗೂ ಪಾಲಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಪ್ರಜಾಪಿತ ಬ್ರಹ್ಮಕುಮಾರಿಯ ಸಂಚಾಲಕಿ ರೂಪಕ್ಕ ತಿಳಿಸಿದರು.

ಈವರೆಗೂ 371 ಶಿವಾನುಭವ ಗೋಷ್ಠಿಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದು, ಅರಿವಿನ ಮನೆಯು ಶರಣರ ಕಾಲದ ಅನುಭವ ಮಂಟಪದಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಶರಣೆ ಅಂಬಾ ಭವಾನಿ ಹೇಳಿದರು. ಅಕ್ಕನ ಬಳಗದ ಸದಸ್ಯರಾದ ವಿಮಲಾಂಬ, ಭಾರತಿ, ರಾಧಾ, ಮೀನಾಕುಮಾರಿ, ನಿರ್ಮಲ, ಚಂದ್ರಕಲಾ, ಭಕ್ತಾಧಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.