ವಿಜಯಪುರ (ದೇವನಹಳ್ಳಿ): ಇಲ್ಲಿನ ಬಿಜ್ಜವಾರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ವನಮಹೋತ್ಸವದಲ್ಲಿ ಹೊಂಗೆ, ನೇರಳೆ, ಹಲಸು, ಮಾವು, ಬೇವು ಸೇರಿ ವಿವಿಧ ತಳಿಯ ಸಸಿಗಳನ್ನು ನೆಡಲಾಯಿತು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕರ್ನಾಟಕ ಘಟಕದ ಅಧಿಕಾರಿಗಳ ಸಂಘದ ಅಧ್ಯಕ್ಷ ಬಿ.ಎನ್. ಮಧುಸೂದನ್ ಮಾತನಾಡಿ, ‘ಪರಿಸರ ಸಂರಕ್ಷಣೆಯು ನಮ್ಮೆಲ್ಲರ ಹೊಣೆಯಾಗಿದ್ದು, ಮರಗಳು ನಮಗೆ ಶುಭ್ರ ಆಮ್ಲಜನಕ ನೀಡುವುದಲ್ಲದೆ, ಮಣ್ಣಿನ ಸವಕಳಿ ತಡೆದು ಕಾಲಕಾಲಕ್ಕೆ ಸರಿಯಾಗಿ ಮಳೆಯಾಗಲು ನೆರವಾಗುತ್ತವೆ’ ಎಂದು ಹೇಳಿದರು.

ಪ್ರತಿಯೊಬ್ಬರೂ ಒಂದು ಗಿಡವನ್ನಾದರೂ ನೆಟ್ಟು ಬೆಳೆಸುವ ಸಂಕಲ್ಪ ಮಾಡಬೇಕು. ವನಮಹೋತ್ಸವವು ಕೇವಲ ಒಂದು ದಿನದ ಆಚರಣೆಗೆ ಸೀಮಿತಗೊಳ್ಳದೆ ಮುಂದಿನ ನಮ್ಮ ಯುವ ಪೀಳಿಗೆಗೆ ಶುದ್ಧ ಹಸಿರು ಭೂಮಿಯನ್ನು ಉಳಿಸುವ ಕಾಯಕವಾಗಬೇಕಿದೆ ಎಂದು ಕೆ.ಕೆ. ಶಶಿವರ್ಧನ್ ಹೇಳಿದರು.

ಎಸ್ಬಿಐ ಆಡಳಿತ ವರ್ಗದ ಅನಿತಾ ನಾಯರ್, ಮಹೇಶ್ ಕುಮಾರ್, ಮಾಧವಿ, ಸತೀಶ್, ಎಸ್.ಸಿ.ಐ ನವ ದೆಹಲಿಯ ಖಜಾಂಚಿ ಕೆ.ಆರ್.ಲವರಾಜು, ಕರ್ನಾಟಕ ಗ್ರೂಪ್ ನ ಕಾರ್ಯದರ್ಶಿ ವಿ. ಪ್ರಶಾಂತ, ಪ್ರಗತಿಪರ ರೈತ ಬಿಜ್ಜವಾರ ಗ್ರಾಮದ ಮದೀಶ್, ವಿದ್ಯಾರ್ಥಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-15-1407883313

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.