ವಿಜಯಪುರ (ದೇವನಹಳ್ಳಿ): ಇಲ್ಲಿನ ದೇವನಹಳ್ಳಿ ರಸ್ತೆ ಅಭಯ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಲು ನ್ಯಾಯಾಲಯ ಮಾಲೀಕರಿಗೆ ಅವಕಾಶ ನೀಡಿದೆ. ಏಪ್ರಿಲ್ 1ರಂದು ದೇವಾಲಯದ ಜಾಗ ಹಾಗೂ ಪೂಜೆ ಹಕ್ಕಿನ ವಿಚಾರವಾಗಿ ದೇವಾಲಯದ ಜಮೀನು ಮಾಲೀಕ ಹಾಗೂ ಅರ್ಚಕ ಬಣದ ಎರಡು ಗುಂಪುಗಳ ನಡುವೆ ಗಲಾಟೆಗೆ ತಿರುಗಿತ್ತು. ಗಲಾಟೆಯನ್ನು ತಿಳಿಗೊಳಿಸಿದ ಪೊಲೀಸರು, ಸಮಸ್ಯೆ ಇತ್ಯರ್ಥಕ್ಕೆ ಎರಡು ಬಣದವರನ್ನು ತಹಶೀಲ್ದಾರ್ ಬಳಿ ಕಳಿಸಿಕೊಟ್ಟಿದ್ದಾರೆ. ಅಂದಿನಿಂದ ದೇವಾಲಯಕ್ಕೆ ಬೀಗ ಹಾಕಿ, ಪೂಜೆ ನಿಲ್ಲಿಸಲಾಗಿತ್ತು.

‘ಇಲ್ಲಿನ ಸ.ನಂ 166/5 ರಲ್ಲಿರುವ ಐದು ಕಾಲು ಗುಂಟೆ ಜಮೀನು ನಮ್ಮ ಹೆಸರಲಿನಲ್ಲಿದೆ. ಎರಡೂವರೆ ಗುಂಟೆ ಜಮೀನಿನ ಜಾಗದಲ್ಲಿ ದೇವಾಲಯ ನಿರ್ಮಿಸಲಾಗಿದೆ. ನ್ಯಾಯಾಲಯ ಇದೀಗ ಅಭಯ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಅನುಮತಿ ನೀಡಿದೆ. ಸತ್ಯಕ್ಕೆ ಜಯ ಸಿಕ್ಕಿದೆ’ ಎಂದು ಜಮೀನು ಮಾಲೀಕ ಜಿ.ಎನ್.ಕೇಶವ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-15-1555007742

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.