ವಿಜಯಪುರ (ದೇವನಹಳ್ಳಿ): ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ನಂಬಿಸಿದ ದರೋಡೆಕೋರರ ತಂಡವೊಂದು ಬುಧವಾರ ಖರೀದಿ ಮಾಡಲು ಬಂದ ಗ್ರಾಹಕರ ಮೇಲೆ ಹಲ್ಲೆ ನಡೆಸಿ ₹20 ಲಕ್ಷ ದೋಚಿ ಪರಾರಿಯಾಗಿದೆ.

ರಾಷ್ಟ್ರೀಯ ಹೆದ್ದಾರಿ 7ರ ವೆಂಕಟಗಿರಿಕೋಟೆ ಸಮೀಪದ ಬಡಾವಣೆಯಲ್ಲಿ ಮಧ್ಯಾಹ್ನ 1.30ರ ಸುಮಾರು ಈ ಘಟನೆ ನಡೆದಿದೆ.

‘ನಮ್ಮ ಬಳಿ 4 ಕೆ.ಜಿ ಚಿನ್ನ ಇದೆ. ಅದರಲ್ಲಿ ಅರ್ಧ ಕೆ.ಜಿ ಚಿನ್ನವನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುವುದು ಎಂದು ವ್ಯಕ್ತಿಯೊಬ್ಬ ಆಂಧ್ರಪ್ರದೇಶ ಮೂಲದ ವಿಶ್ವಪ್ರಸಾದ ರೆಡ್ಡಿ ಎಂಬುವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾನೆ. ಇದನ್ನು ನಂಬಿದ ವಿಶ್ವಪ್ರಸಾದ ರೆಡ್ಡಿ ತನ್ನ ಸ್ನೇಹಿತರಾದ ಬಾಜಿ ಮತ್ತು ಪುಟ್ಟಯ್ಯ ಜೊತೆಯಲ್ಲಿ ಚಿನ್ನ ಖರೀದಿಸಲು ಬಂದಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

ಮೊದಲಿಗೆ ವಿಶ್ವಪ್ರಸಾದ ರೆಡ್ಡಿ ಮತ್ತು ಸ್ನೇಹಿತರ ಬಳಿ ಅಪರಿಚಿತರಿಬ್ಬರು ಬಂದರು. ನಂತರ ನಾಲ್ವರು ಅವರ ಜೊತೆಗೂಡಿದರು. ಆರು ದರೋಡೆಕೋರರು ಸೇರಿ ಮೂವರ ಮೇಲೆ ಹಲ್ಲೆ ನಡೆಸಿ ಅವರ ಬಳಿ ಇದ್ದ ₹20 ಲಕ್ಷ ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು
ತಿಳಿಸಿದ್ದಾರೆ.

ಹಣ ಕಳೆದುಕೊಂಡವರು ವಿಜಯಪುರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್, ದೊಡ್ಡಬಳ್ಳಾಪುರ ಡಿವೈಎಸ್ಪಿ ಪಾಂಡುರಂಗ, ಇನ್ಸ್ಪೆಕ್ಟರ್ ಪ್ರಶಾಂತ್ ನಾಯಕ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.