ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಟ್ಟೆ,ಚಿಕ್ಕಿ,ಬಾಳೇಹಣ್ಣು ವಿತರಣೆಗೆ ಚಾಲನೆ; 15,000 ಮಕ್ಕಳಿಗೆ ಯೋಜನೆ ವಿಸ್ತರಣೆ

ಜಿಲ್ಲೆಯ 15 ಸಾವಿರ ಮಕ್ಕಳಿಗೆ ಯೋಜನೆ ವಿಸ್ತರಣೆ
Published 23 ಆಗಸ್ಟ್ 2023, 14:01 IST
Last Updated 23 ಆಗಸ್ಟ್ 2023, 14:01 IST
ಅಕ್ಷರ ಗಾತ್ರ

ವಿಜಯಪುರ(ದೇವನಹಳ್ಳಿ): ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಆವರಣದಲ್ಲಿ ಬುಧವಾರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮೊಟ್ಟೆ, ಬಾಳೆಹಣ್ಣು, ಚಿಕ್ಕಿ ವಿತರಣೆ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಚಾಲನೆ ನೀಡಿದರು.

ಮಕ್ಕಳೊಂದಿಗೆ ಕುಳಿತು ಊಟ ಸಚಿವ ಮೂಲಕ ಚಾಲನೆ ನೀಡಿದ ಕೆ.ಎಚ್‌.ಮುನಿಯಪ್ಪ ಮಾತನಾಡಿ, ಶಿಕ್ಷಣದ ಜತೆಗೆ ಮಕ್ಕಳನ್ನು ಅಪೌಷ್ಟಿಕತೆಯಿಂದ ದೂರು ಮಾಡಲು ಈ ಯೋಜನೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಮಹಾತ್ಮ ಗಾಂಧಿಜೀ ಹಾಗೂ ಜವಾಹರಲಾಲ್ ಅವರ ಕನಸಿನ ರಾಷ್ಟ್ರ ನಿರ್ಮಾಣ ಜವಾಬ್ದಾರಿ ಶಿಕ್ಷಕರು ಮತ್ತು ಮಕ್ಕಳ ಮೇಲಿದೆ. ಶಿಕ್ಷಣದ ಜೊತೆಯಲ್ಲೆ, ಪಠ್ಯೇತರ ಚಟುವಟಿಕೆಗಳ ಕಡೆಗೂ ಹೆಚ್ಚು ಗಮನಹರಿಸಬೇಕು ಎಂದರು.

ಯಾವುದೇ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲದಂತೆ ಮಕ್ಕಳನ್ನು ತಯಾರು ಮಾಡಬೇಕು. ಸರ್ಕಾರಿ ಶಾಲೆಗಳಿಗೆ ಅಗತ್ಯವಾಗಿರುವ ಪ್ರೋತ್ಸಾಹ ನೀಡಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಅನುರಾಧ ಮಾತನಾಡಿ, ಶಾಲಾ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸುವುದು ಉದ್ದೇಶದಿಂದ  ಪ್ರಾಥಾಮಿಕ ಶಾಲಾ ಮಕ್ಕಳಿಗೆ ಮೊಟ್ಟೆ, ಬಾಳೆ ಹಣ್ಣು ಮತ್ತು ಚಿಕ್ಕಿ ವಿತರಿಸಲಾಗುತ್ತಿತು. ಈ ಯೋಜನೆಯನ್ನು ಪ್ರೌಢಶಾಲೆಗೂ ವಿಸ್ತರಣೆ ಮಾಡಲಾಗಿದೆ. ಇದರ ಜೊತೆಯಲ್ಲಿ 150ಎಂ.ಎಲ್. ಹಾಲು, ಎರಡು ದಿನ ಮೊಟ್ಟೆ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 1,188 ಶಾಲೆಗಳಲ್ಲಿ 67,851 ಮಕ್ಕಳಿದ್ದಾರೆ. ಪ್ರಾಥಮಿಕ ಶಾಲೆಯ 52 ಸಾವಿರ ಮಕ್ಕಳಿಗೆ ಯೋಜನೆ ಲಭ್ಯವಾಗುತ್ತಿತು. ವಾರ್ಷಿಕ ಖರ್ಚು ₹30 ಕೋಟಿ ಆಗುತ್ತಿತು. ಈಗ 8-10 ನೇ ತರಗತಿಯ 15 ಸಾವಿರ ಮಕ್ಕಳಿಗೂ ಯೋಜನೆ ವಿಸ್ತರಣೆ ಆಗುತ್ತಿದೆ. ಇದಕ್ಕೆ ಹೆಚ್ಚುವರಿ ₹75 ಲಕ್ಷ ಖರ್ಚಾಗುತ್ತಿದೆ ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷೆ ವಿಮಲಾಬಸವರಾಜ್ ಮಾತನಾಡಿದರು.

ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀಕಂಠ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥ್ ಗೌಡ, ಪುರಸಭೆ ಉಪಾಧ್ಯಕ್ಷ ಎಂ.ಕೇಶವಪ್ಪ, ಪುರಸಭೆ ಸದಸ್ಯರಾದ ಎಂ.ಸತೀಶ್ ಕುಮಾರ್, ಎ.ಆರ್.ಹನಿಪುಲ್ಲಾ, ಭವ್ಯಮಧು, ಎಂ.ನಾರಾಯಣಸ್ವಾಮಿ, ರಾಜಣ್ಣ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಶಾಂತ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ರಾಮಚಂದ್ರಪ್ಪ, ಪ್ರಸನ್ನಕುಮಾರ್, ಪ್ರಧಾನ ಕಾರ್ಯದರ್ಶಿ ನಾಗೇಗೌಡ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಗೌಸ್ ಖಾನ್, ಎಸ್.ಸಿ.ಘಟಕದ ಅಧ್ಯಕ್ಷ ಲೋಕೇಶ್, ಹೋಬಳಿ ಎಸ್.ಟಿ.ಘಟಕದ ಅಧ್ಯಕ್ಷ ಮುನಿಆಂಜಿನಪ್ಪ, ಮಂಜುನಾಥ್, ವೇಣುಗೋಪಾಲ್, ಧರ್ಮಪುರ ಕೃಷ್ಣಪ್ಪ, ಸಿ.ಆರ್.ಪಿ.ಮುನಿಯಪ್ಪ, ಕಾಲೇಜಿನ ಪ್ರಾಂಶುಪಾಲ ಗೋಪಾಲಯ್ಯ, ಉಪಪ್ರಾಂಶುಪಾಲ ಪಿ.ವೆಂಕಟೇಶ್, ಪಿ.ಎಂ.ಕೊಟ್ರೇಶ್, ರಾಜುಹವಳೇಕರ್, ಪ್ರಿಯದರ್ಶಿನಿ, ಹಾಜರಿದ್ದರು.

ಎಲ್ಲ ಶಾಲೆಗಳಲ್ಲಿಯೂ ರಾಷ್ಟ್ರಗೀತೆಗೂ ಮುನ್ನ ಬಸವಣ್ಣ ಅವರ ತತ್ವ ಚಿಂತನೆ ತಿಳಿಸಬೇಕು ಕೆ.ಎಚ್‌.ಮುನಿಯಪ್ಪ ಸಚಿವ

ಅಮೃತ ಮಹೋತ್ಸವ ಸಂಭ್ರಮ ಕೆಪಿಸಿಸಿ ಕಾರ್ಯದರ್ಶಿ ವಿ.ಮಂಜುನಾಥ್ ಮಾತನಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆ ಮುಂದಿನ ಸಾಲಿನಲ್ಲಿ 75 ವರ್ಷ ಪೂರ್ಣಗೊಳಿಸಲಿದ್ದು ಅಮೃತ ಮಹೋತ್ಸವ ಆಚರಿಸಲಿದೆ. ಹೀಗಾಗಿ ಶಾಲೆಯಲ್ಲಿ ಅಮೃತಮಹೋತ್ಸವ ಭವನ ನಿರ್ಮಾಣವಾಗಬೇಕು. ಪಟ್ಟಣಕ್ಕೆ ಪದವಿ ಕಾಲೇಜು ಮಂಜೂರು ಮಾಡಿಸಬೇಕು ಎಂದು ಮನವಿ ಸಚಿವರಲ್ಲಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT