ವಿಜಯಪುರ (ದೇವನಹಳ್ಳಿ): ಇಲ್ಲಿನ ಮೇಲೂರು ರಸ್ತೆಯ ಶ್ರೀಸಾಯಿ ಜ್ಞಾನಗಂಗಾ ಪದವಿ ಕಾಲೇಜಿನಲ್ಲಿ ಪರಿಸರ ಸಂರಕ್ಷಣಾ ಜಾಗೃತಿ ಕಾರ್ಯಕ್ರಮ ನಡೆಯಿತು. ಕಾಲೇಜಿನ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.

‘ನಾವು ಪರಿಸರವನ್ನು ರಕ್ಷಿಸಿದರೆ ಪರಿಸರವು ನಮ್ಮನ್ನು ರಕ್ಷಿಸುತ್ತದೆ. ಈ ಭೂಮಿಯು ಕೇವಲ ನಮಗೊಬ್ಬರಿಗೆ ಮಾತ್ರವಲ್ಲದೇ ಮುಂದಿನ ಪೀಳಿಗೆಗೂ ಸೇರಿದೆ. ಆದ್ದರಿಂದ ನಮ್ಮ ಈ ಪರಿಸರದ ಸಂರಕ್ಷಣೆ ಬಗ್ಗೆ ಎಲ್ಲೆಡೆ ಜಾಗೃತಿ ಮೂಡಿಸಿ ಸ್ವಚ್ಛ ಪರಿಸರ ಉಳಿಸೋಣ’ ಎಂದು ಸಂಸ್ಥೆ ಅಧ್ಯಕ್ಷ ಬಿ.ಮಂಜುನಾಥ್ ತಿಳಿಸಿದರು.

‘ನಾವು ವಾಸಿಸುತ್ತಿರುವ ನಮ್ಮ ಸುತ್ತ ಮುತ್ತಲಿನ ಗಾಳಿ, ನೀರು, ಮಣ್ಣು, ಸಸ್ಯ ಮತ್ತು ಪ್ರಾಣಿ ಸಂಕುಲಗಳನ್ನೊಳಗೊಂಡ ವಾತಾವರಣವೇ ಪರಿಸರ. ಪರಿಸರ ಮತ್ತು ಮಾನವನ ನಡುವಿನ ಈ ಭೂಮಿಯ ಸಂಬಂಧವು ಅವಿನಾಭಾವವಾದದ್ದು’ ಎಂದು ಸಾಯಿ ಜ್ಞಾನಗಂಗಾ ಪದವಿ ಕಾಲೇಜಿನ ಪ್ರಾಂಶುಪಾಲ ಎಸ್.ಎಸ್.ಪ್ರದೀಪ್ ತಿಳಿಸಿದರು.

ನಾರಾಯಣಪುರದ ಶ್ರೀಸಾಯಿ ಜ್ಞಾನಗಂಗಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ಕೆ. ನಾರಾಯಣಸ್ವಾಮಿ, ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ವಿ.ಪ್ರಶಾಂತ್, ಉಪನ್ಯಾಸಕ ರಾದ ಮುರಳಿ ಮೋಹನ್, ಮುಬಾರಕ್, ಕೆ.ಅರ್ಚನ, ಎಂ.ಅಂಬಿಕಾ, ಡಿ.ಎನ್.ನಾಗೇಶ್, ಎಂ.ಜಿ. ಹರೀಶ್, ಲಕ್ಷ್ಮಿದೇವಮ್ಮ, ಕೆ.ಎಂ.ನಾಗರಾಜ್, ಬಿ.ಎಸ್.ಶರತ್, ಎಂ.ಚೈತ್ರ,ಎನ್. ಪ್ರಸನ್ನ ಕುಮಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-15-909043824

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.