ವಿಜಯಪುರ (ದೇವನಹಳ್ಳಿ): ಪಟ್ಟಣದ ಗ್ರಾಮದೇವತೆ ಗಂಗಾದೇವಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಮಂಗಳವಾರ ನಡೆಯಿತು. ದೇವರಿಗೆ ವಿವಿಧ ಅಲಂಕಾರಗಳೊಂದಿಗೆ ಹಾಗೂ ಪೂಜೆಯೊಂದಿಗೆ ಜಾತ್ರಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.

ಪಟ್ಟಣದ ಪ್ರಮುಖ ಬೀದಿಗಳು, ದೇವಾಲಯಗಳು ವಿದ್ಯುತ್ ದೀಪಗಳಿಂದ ಕಂಗೊಳಿಸಿದವು. ದುರ್ಗಾ, ಸತ್ಯಮ್ಮ, ಸಪಲಮ್ಮ, ಮಾರಮ್ಮ ಹಾಗೂ ಸಪ್ತ ಮಾತೃಕೆಯರಿಂದ ಕೂಡಿದ ಚೌಡೇಶ್ವರಿ ಉತ್ಸವ ಹಬ್ಬದ ಕಳೆಯನ್ನು ಹೆಚ್ಚಿಸಿತು.

ಜಾತ್ರಾ ಮಹೋತ್ಸವ ಅಂಗವಾಗಿ ಮಹಿಳೆಯರು ತಂಬಿಟ್ಟಿನ ದೀಪಗಳ ಅಲಂಕೃತ ಕಲಶವನ್ನು ಹೊತ್ತು ವಿವಿಧ ವಾದ್ಯ ತಂಡಗಳೊಡನೆ ಮೆರವಣಿಗೆಯಲ್ಲಿ ಸಾಗಿ ಗ್ರಾಮ ದೇವತೆಗಳಿಗೆ ದೀಪ ಬೆಳಗುವ ಮೂಲಕ ಹರಕೆ ತೀರಿಸಿದರು.

ಗಂಗಾದೇವಿಯ ದೇವಾಲಯದಲ್ಲಿ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಸಾವಿರಾರು ಭಕ್ತರು ಸಾಲುಗಟ್ಟಿ ನಿಂತು ದೇವಿಯ ದರ್ಶನ ಪಡೆದರು.

ಪಟ್ಟಣದ ಚೆನ್ನಕೇಶವಸ್ವಾಮಿ ಕಾಂಪ್ಲೆಕ್ಸ್ನಲ್ಲಿ ಬೆಂಗಳೂರಿನ ನಗರ ದೇವತೆ ಅಣ್ಣಮ್ಮ ತಾಯಿಯನ್ನು ಪ್ರತಿಷ್ಠಾಪಿಸಿ, ವಜ್ರಾಭರಣಗಳಿಂದ ಅಲಂಕರಿಸಲಾಗಿತ್ತು. ಭಕ್ತಾದಿಗಳು ಮಡಿಲಕ್ಕಿ ಮತ್ತು ಸೀರೆ ಸಲ್ಲಿಸಿದರು.

ಜಾತ್ರೆಯಲ್ಲಿ ತಮಟೆ ಸದ್ದು, ಗಾರುಡಿ ಗೊಂಬೆ, ಹುಲಿವೇಷದ ಕುಣಿತಗಳು ಆಕರ್ಷಿಸಿದವು. ಪ್ರಮುಖ ವೃತ್ತಗಳಲ್ಲಿ ಪಲ್ಲಕ್ಕಿ ಉತ್ಸವ ಹಾಗೂ ಗಾನವೃಂದದವರಿಂದ ಭಕ್ತಿ ಮತ್ತು ಭಾವಗೀತೆಗಳ ಕಾರ್ಯಕ್ರಮ ನಡೆದವು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು.

ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ವೆಂಕಟೇಶ್ವರ ಪ್ರಭು, ಮುತ್ಯಾಲಪ್ಪ, ದೇವರಾಜು, ಅನ್ನಪೂರ್ಣಮ್ಮ, ರಾಜೇಶ್ವರಿ ಭಾಸ್ಕರ್, ಜಾತ್ರಾ ಸಮಿತಿ ಅಧ್ಯಕ್ಷ ಎಂ.ಸತೀಶ್ ಕುಮಾರ್, ಸಮಿತಿ ಸದಸ್ಯ ಸಂಪತ್ ಕುಮಾರ್, ಎಂ.ನಾಗರಾಜು, ಎನ್.ರುದ್ರಮೂರ್ತಿ, ರಂಗನಾಥ್, ಮಂಜುನಾಥ್, ಚನ್ನಕೃಷ್ಣ, ಬಾನು, ಚಂದರ್, ಎಚ್.ಎಂ.ಕೃಷ್ಣಪ್ಪ, ಆಂಜನಪ್ಪ, ಮುನಿರಾಜು, ರಾಜಣ್ಣ, ಗಂಗಯ್ಯ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-15-1630882332

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.