ವಿಜಯಪುರ (ದೇವನಹಳ್ಳಿ): ಕಳೆದ ವರ್ಷ ಬೆಲೆ ಕುಸಿತದಿಂದ ಕಂಗಾಲಾಗಿದ್ದ ಜಿಲ್ಲೆಯ ಬೆಳೆಗಾರರನ್ನು ಈ ಬಾರಿ ದ್ರಾಕ್ಷಿ ಬೆಳೆ ಕೈ ಹಿಡಿದಿದೆ. ಸದ್ಯ ಮಾರುಕಟ್ಟೆಯಲ್ಲಿ ದ್ರಾಕ್ಷಿ ಹಣ್ಣಿಗೆ ಉತ್ತಮ ಬೆಲೆ ಸಿಗುತ್ತಿರುವುದರಿಂದ ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿಸಿದೆ.

ಹಿಂದಿನ ವರ್ಷಗಳಲ್ಲಿ ಕೊರೊನಾ ಕಾಟ, ಅಕಾಲಿಕ ಮಳೆ, ಬಿರುಗಾಳಿ, ಆಲಿಕಲ್ಲು ಹೊಡೆತ, ಇಳುವರಿ ಕುಸಿತ, ಬೇಡಿಕೆ, ದರ ಕುಸಿತ ಹೀಗೆ.. ನಾನಾ ಕಾರಣಗಳಿಂದ ನಷ್ಟಕ್ಕೆ ಗುರಿಯಾಗಿದ್ದ ದ್ರಾಕ್ಷಿ ಬೆಳೆಗಾರರು ಈ ಬಾರಿ ಸಮೃದ್ಧ ದ್ರಾಕ್ಷಿ ಫಸಲಿನ ಜೊತೆಗೆ ಬೆಲೆ ಉತ್ತಮವಾಗಿರುವುದರಿಂದ ಬೆಳೆಗಾರರು ಕೈ ತುಂಬಾ ಹಣ ಸಂಪಾದಿಸುತ್ತಿದ್ದಾರೆ.

ಜಿಲ್ಲೆಯಲ್ಲೇ ದೇವನಹಳ್ಳಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ದ್ರಾಕ್ಷಿ ಬೆಳೆಯಲಾಗುತ್ತಿದೆ. ನಾನಾ ತಳಿಯ ಸುಮಾರು 1,200 ಹೆಕ್ಟೇರ್ ಪ್ರದೇಶ ದ್ರಾಕ್ಷಿ ಹೊಂದಿದೆ. ಅದರಲ್ಲೂ ವಿಜಯಪುರ ಹೋಬಳಿಯಲ್ಲಿ ಸುಮಾರು 700 ಹೆಕ್ಟೇರ್ಗೂ ಅಧಿಕ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ.

ಪ್ರಮುಖವಾಗಿ ಕಪ್ಪು ದ್ರಾಕ್ಷಿ (ಬೆಂಗಳೂರು ಬ್ಲೂ), ಶರತ್ ಹೆಚ್ಚಾಗಿ ಬೆಳೆಯಲಾಗುತ್ತಿದೆ. ದಿಲ್ ಕುಷ್, ಆರ್ ಕೆ ಗೋಲ್ಡ್, ಸೊನಾಕಾ, ರೆಡ್ ಬ್ಲೂ ಹೀಗೆ ನಾನಾ ತಳಿಯ ದ್ರಾಕ್ಷಿಯನ್ನು ಹಲವೆಡೆ ಬೆಳೆಯಲಾಗುತ್ತಿದೆ. ಈ ಬಾರಿ ಇಳುವರಿ ಚೆನ್ನಾಗಿ ಬಂದಿರುವುದರಿಂದ ಎಕರೆಗೆ 10 ರಿಂದ 12 ಟನ್ ವರೆಗೂ ದ್ರಾಕ್ಷಿ ಫಸಲು ಬಂದಿದೆ ರೈತರ ತೋಟದ ಬಳಿಯೇ ವ್ಯಾಪಾರಿಗಳು ಬಂದು ಖರೀದಿಸುತ್ತಿದ್ದಾರೆ.

ವಾರದ ಹಿಂದೆ 1 ಕೆ.ಜಿಗೆ ₹20 ರಿಂದ ₹25 ಇದ್ದ ಕಪ್ಪು ದ್ರಾಕ್ಷಿ ಈಗ ₹40 ದಾಟಿದೆ. ಶರತ್ ₹80 ರಿಂದ ₹90, ರೆಡ್ ಗ್ಲೋಬ್ ₹120-₹130, ದಿಲ್ಖುಷ್ ₹40-₹50 ವರೆಗೂ ಮಾರಾಟ ಆಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಾರುಕಟ್ಟೆಯಲ್ಲಿ ದ್ರಾಕ್ಷಿಗೆ ಉತ್ತಮ ಬೆಲೆ ಸಿಗುತ್ತಿದೆ.

ನೆರೆ ರಾಜ್ಯಗಳಿಂದ ಬೇಡಿಕೆ: ಫೆಬ್ರವರಿ, ಮಾರ್ಚ್, ಏಪ್ರಿಲ್, ಮೇ ತಿಂಗಳ ವರೆಗೂ ದ್ರಾಕ್ಷಿ ಕೊಯ್ಲು ನಡೆಯುತ್ತದೆ. ಈ ಬಾರಿ ಮಹಾರಾಷ್ಟ್ರದಲ್ಲಿ ದ್ರಾಕ್ಷಿ ಇಳುವರಿ ಕುಸಿತದಿಂದ ತಮಿಳುನಾಡು, ಆಂಧ್ರಪ್ರದೇಶ, ಕೇರಳ ಸೇರಿದಂತೆ ಹಲವು ರಾಜ್ಯಗಳಿಂದ ಇಲ್ಲಿನ ದ್ರಾಕ್ಷಿಗೆ ಬೇಡಿಕೆ ಬಂದಿದೆ. ಹೀಗಾಗಿ ಈ ಬಾರಿ ದ್ರಾಕ್ಷಿ ದರ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನುತ್ತಾರೆ ದ್ರಾಕ್ಷಿ ಬೆಳೆಗಾರರು.

‘ವಿಜಯಪುರ ಹೋಬಳಿಯ ಹಾರೋಹಳ್ಳಿ ಗ್ರಾಮದ ಬಹುತೇಕ ರೈತರು ದ್ರಾಕ್ಷಿ ಬೆಳೆಯುತ್ತಿದ್ದಾರೆ. ನಾವು ಸುಮಾರು 30 ರಿಂದ 40 ವರ್ಷದಿಂದ ದ್ರಾಕ್ಷಿ ಬೆಳೆಯುತ್ತಿದ್ದೇವೆ. ಲಾಭ ನಷ್ಟ ಎರಡನ್ನು ನೋಡಿದ್ದೇವೆ. ಇದೀಗ ದ್ರಾಕ್ಷಿಗೆ ಉತ್ತಮ ಬೆಲೆ ಸಿಗುತ್ತಿರುವುದರಿಂದ ಬೆಳೆಗಾರರಿಗೆ ಒಳ್ಳೆಯ ಆದಾಯ ತಂದಿದೆ’ ಎನ್ನುತ್ತಾರೆ ಹಾರೋಹಳ್ಳಿಯ ದ್ರಾಕ್ಷಿ ಬೆಳೆಗಾರ ಎಚ್.ವಿ.ನಂದಕುಮಾರ್.

ದಾಳಿಂಬೆಯತ್ತ ಮೊರೆ: ಹಿಂದಿನ ವರ್ಷಗಳಲ್ಲಿ ನಾನಾ ಕಾರಣಗಳಿಂದ ದ್ರಾಕ್ಷಿಗೆ ಉತ್ತಮ ಬೆಲೆ ಸಿಕ್ಕಿರಲಿಲ್ಲ. ಹೀಗಾಗಿ ಸಾಕಷ್ಟು ರೈತರು ದ್ರಾಕ್ಷಿ ಬಿಟ್ಟು ಈಚೆಗೆ ಈ ಭಾಗದಲ್ಲಿ ಜನಪ್ರಿಯವಾಗುತ್ತಿರುವ ದಾಳಿಂಬೆ ಬೆಳೆಯುವತ್ತ ಆಸಕ್ತಿ ತೋರಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-15-1801280053

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.