ವಿಜಯಪುರ (ದೇವನಹಳ್ಳಿ): ಸತತ ಎರಡು ಬಾರಿ ಬಜೆಟ್ ಮಂಡನೆ ದಿನ ಮುಂದೂಡಿದ್ದ ಪುರಸಭೆ ಅಧ್ಯಕ್ಷೆ ಭವ್ಯ ಮಹೇಶ್ ಸೋಮವಾರ 2026-27ನೇ ಸಾಲಿನ ಬಜೆಟ್ ಮಂಡಿಸಿದರು.

2026-27ನೇ ಆರ್ಥಿಕ ವರ್ಷದ ಬಜೆಟ್ ಗಾತ್ರ ₹61.52 ಕೋಟಿ ಆಗಿದ್ದು, ₹61.23 ಕೋಟಿ ಖರ್ಚು ಮತ್ತು ₹29.50 ಲಕ್ಷ ಉಳಿತಾಯ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಪುರಸಭೆ ನೂತನ ಕಟ್ಟಡ ನಿರ್ಮಾಣಕ್ಕೆ ₹6 ಕೋಟಿ, ಪೀಠೋಪಕರಣಗಳಿಗೆ ₹15ಲಕ್ಷ, ಸ್ವಾಗತ ಕಮಾನು, ತಡೆಗೋಡೆ ನಿರ್ಮಾಣ, ರಸ್ತೆಬದಿ ಮಾರ್ಗಸೂಚಿ ಫಲಕ ಹಾಗೂ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ₹15ಲಕ್ಷ, ಪಾದಚಾರಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿಗೆ ₹1.30ಕೋಟಿ, ಬೀದಿದೀಪಗಳಿಗೆ ₹8ಲಕ್ಷ, ಚರಂಡಿ ಕಾಮಗಾರಿಗೆ ₹30 ಲಕ್ಷ ಮೀಸಲಿಡಲಾಗಿದೆ.

ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕೆ ₹25ಲಕ್ಷ, ಸ್ಮಶಾನ ಅಭಿವೃದ್ಧಿಗೆ ₹25ಲಕ್ಷ, ಘನತ್ಯಾಜ್ಯ ವಸ್ತು ನಿರ್ವಹಣೆಗೆ ₹50ಲಕ್ಷ, ನೀರು ಸರಬರಾಜು ಕಟ್ಟಡ ನಿರ್ಮಾಣ ಮತ್ತು ಯಂತ್ರೋಪಕರಣ ಖರೀದಿಗೆ ₹1.25ಕೋಟಿ, ಒಳಚರಂಡಿ ಅಭಿವೃದ್ಧಿ ಕಾಮಗಾರಿಗೆ ₹20ಲಕ್ಷ, ಪಾರ್ಕ್ ಅಭಿವೃದ್ಧಿಗೆ ₹20 ಲಕ್ಷ, ಅಧ್ಯಯನ ಪ್ರವಾಸ ಹಾಗೂ ಸದಸ್ಯರ ಗೌರವಧನಕ್ಕಾಗಿ ₹45 ಲಕ್ಷ ಮೀಸಲಿಡಲಾಗಿದೆ.

ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಸದಸ್ಯರಾದ ಎಂ.ಸತೀಶ್ ಕುಮಾರ್, ಎಂ.ಕೇಶವಪ್ಪ, ವಿ.ನಂದಕುಮಾರ್, ಸಿ.ಎಂ.ರಾಮು, ಎ.ಆರ್.ಹನೀಫುಲ್ಲಾ, ವಿಮಲಾ ಬಸವರಾಜ್, ಸೈಯದ್ ಎಕ್ಬಾಲ್, ಎಂ.ರಾಜಣ್ಣ, ಶಿಲ್ಪಾ ಅಜಿತ್, ನಾರಾಯಣಸ್ವಾಮಿ, ಆಯಿಷಾ ಸೈಫುಲ್ಲಾ, ಸಲ್ಮಾ ಖಾನಂ, ಮಂಜುಳಮ್ಮ ಮುನಿರಾಜು, ಸುಷ್ಮಾ ಮಹೇಶ್, ಶ್ರೀರಾಮಣ್ಣ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-15-932976937

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.