ವಿಜಯಪುರ (ದೇವನಹಳ್ಳಿ): ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ಆಂಧ್ರ ಪ್ರದೇಶ ಮೂವರಿಂದ ವಿಜಯಪುರ ಬಳಿ ₹15 ಲಕ್ಷ ದೋಚಿ ಪರಾರಿಯಾಗಿದ್ದ ಏಳು ದರೋಡೆಕೋರರಲ್ಲಿ ಐವರನ್ನು ವಿಜಯಪುರ ಟೌನ್ ಪೊಲೀಸರು ವಿಜಯನಗರ ಜಿಲ್ಲೆಯಲ್ಲಿಯ ಹರಪನಹಳ್ಳಿಯಲ್ಲಿ ಬಂಧಿಸಿದ್ದಾರೆ.

ಹರಪನಹಳ್ಳಿ ತಾಲ್ಲೂಕಿನ ಚಿಗಟೇರಿ ಹೋಬಳಿ ಯಲ್ಲಾಪುರ ಗ್ರಾಮದ ಕಾವಾಡಿ ಷಣ್ಮಖ (24), ಷಣ್ಮುಖ (32), ಕಾವಾಡಿ ಗಣೇಶ್ (23), ದ್ಯಾಪನಹಳ್ಳಿಯ ಸಣ್ಣಜ್ಜನವರ್ ಸಾಗರ್ (28), ಹಾರಕ್ಕನಹಳ್ಳಿ ಗ್ರಾಮದ ಪೂಜಾರಿ ಮಂಜಪ್ಪ (40) ಅವರನ್ನು ವಿಜಯಪುರ ಪೊಲೀಸರು ಈಚೆಗೆ ಹರಪನಹಳ್ಳಿಯಲ್ಲಿ ಬಂಧಿಸಿ ಕರೆತಂದಿದ್ದಾರೆ.

ರಮೇಶ್ ಕುಮಾರ್ ಮತ್ತು ಸುನೀಲ್ ಎಂಬುವರು ತಲೆ ಮರೆಸಿಕೊಂಡಿದ್ದಾರೆ. ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಕಾರು, ನಕಲಿ ಚಿನ್ನ ಮತ್ತು ದರೋಡೆ ಮಾಡಿದ್ದ ₹15 ಲಕ್ಷ ನಗದು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆಂಧ್ರಪ್ರದೇಶದ ವಿಶ್ವಪ್ರಸಾದ ರೆಡ್ಡಿ ಎಂಬುವರಿಗೆ ವ್ಯಕ್ತಿಯೊಬ್ಬ ದೂರವಾಣಿ ಕರೆ ಮಾಡಿ ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ನಂಬಿಸಿ, ವಿಜಯಪುರ ಹೋಬಳಿಯ ರಾಷ್ಟ್ರೀಯ ಹೆದ್ದಾರಿ 7ರ ವೆಂಕಟಗಿರಿಕೋಟೆ ಬಡಾವಣೆಗೆ ಬುಧವಾರ ಕರೆಸಿಕೊಂಡಿದ್ದರು. ₹15 ಲಕ್ಷದೊಂದಿಗೆ ಬಂದ ವಿಶ್ವಪ್ರಸಾದ ಹಾಗೂ ಇಬ್ಬರು ಸ್ನೇಹಿತರ ಮೇಲೆ ಆರು ದರೋಡೆಕೋರರು ಹಲ್ಲೆ ಮಾಡಿ ₹15 ಲಕ್ಷ ಹಣ ದೋಚಿ ಪರಾರಿಯಾಗಿದ್ದರು. ವಿಜಯಪುರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.