ವಿಜಯಪುರ (ದೇವನಹಳ್ಳಿ): ಖಾತೆ ಬದಲಾವಣೆಗಾಗಿ ಸಾರ್ವಜನಿಕರು ಸಲ್ಲಿಸುವ ಅರ್ಜಿಗಳನ್ನು ವಿನಾಕಾರಣ ಅಧಿಕಾರಿಗಳು ಬಾಕಿ ಉಳಿಸಿಕೊಂಡು ಅಲೆದಾಡಿಸುತ್ತಿದ್ದಾರೆ ಎಂದು ಆರೋಪಿಸಿ ಶುಕ್ರವಾರ ಇಲ್ಲಿನ ಪುರಸಭೆಯ ಆವರಣದಲ್ಲಿ ವೃದ್ಧೆ ಅರ್ಜಿದಾರರೊಂದಿಗೆ ಪುರಸಭೆ ಸದಸ್ಯ ಎಂ.ಸತೀಶ್ ಕುಮಾರ್, ಸಿ.ಎಂ.ರಾಮು ಸೇರಿದಂತೆ ಹಲವರು ಸುಡು ಬಿಸಿಲಿನಲ್ಲಿ ಪ್ರತಿಭಟನೆ ನಡೆಸಿದರು.

‘ಖಾತೆ ಬದಲಾವಣೆಗಾಗಿ ಕಳೆದ ವರ್ಷ ಅರ್ಜಿಸಲ್ಲಿಸಿದ್ದೇವೆ. ಇದುವರೆಗೂ ಪುರಸಭೆಯ ಅಧಿಕಾರಿಗಳು ಖಾತೆ ಮಾಡದೇ ವಿನಾಕಾರಣ ಅಲೆದಾಡಿಸುತ್ತಿದ್ದಾರೆ. ನಾಗರಿಕರು ಕೆಲಸದ ನಿಮಿತ್ತವಾಗಿ ಕಚೇರಿ ಬಂದಾಗ ಕನಿಷ್ಠ ಅವರಿಗೆ ಕುಳಿತುಕೊಳ್ಳಲು ಕುರ್ಚಿಗಳನ್ನೂ ನೀಡುವುದಿಲ್ಲ. ಹಿರಿಯ ನಾಗರಿಕರಿಗೆ ಕನಿಷ್ಠ ಗೌರವ ಸಿಗುತ್ತಿಲ್ಲ’ ಎಂದು ವೃದ್ಧೆ ಲಲಿತಮ್ಮ ಆರೋಪಿಸಿದರು.

ಅಧಿಕಾರಿಗಳು ನಿಗದಿತ ಸಮಯದಲ್ಲಿ ಖಾತೆಗಳು ಮಾಡಿಕೊಡದೇ ಹೋದರೆ, ಅವರು ಸರ್ಕಾರಿ ಸಂಬಳ ಏಕೆ ಪಡೆಯಬೇಕು. ಕೆಲಸದ ನಿಮಿತ್ತ ಬರುವ ಸಾರ್ವಜನಿಕರನ್ನು ಪದೇ ಪದೇ ಕಚೇರಿಗೆ ಅಲೆದಾಡಿಸುತ್ತಿರುವ ಅಧಿಕಾರಿಗಳ ವಿರುದ್ಧ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪುರಸಭೆಯಲ್ಲಿ ಸಾರ್ವಜನಿಕರ ಕೆಲಸಗಳು ವಿಳಂಬವಾಗದಂತೆ ಅಧಿಕಾರಿಗಳು ಕ್ರಮವಹಿಸಬೇಕು. ಸಾರ್ವಜನಿಕರ ಜೊತೆ ಸೌಜನ್ಯವಾಗಿ ವರ್ತಿಸಬೇಕು. ನಾಗರಿಕರನ್ನು ಪದೇ ಪದೇ ಕಚೇರಿಗಳಿಗೆ ಅಲೆದಾಡಿಸಬಾರದು ಎಂದು ಪುರಸಭೆ ಸದಸ್ಯ ಎಂ.ಸತೀಶ್ ಕುಮಾರ್ ಆಗ್ರಹಿಸಿದರು.

ಪುರಸಭೆಯ ಅಧಿಕಾರಿಗಳಿಗೆ ಸಾರ್ವಜನಿಕರ ಬಗ್ಗೆ ಕಿಂಚಿತ್ತೂ ಕಾಳಜಿಯೂ ಇಲ್ಲ. ಬಹಳಷ್ಟು ಮಂದಿ ನಾಗರಿಕರಿಂದ ಅರ್ಜಿಗಳನ್ನೂ ಪಡೆಯುವುದಿಲ್ಲ. ಕೆಲವರು ತೆರಿಗೆ ಕಟ್ಟಿದ್ದರೂ, ಅದನ್ನು ಆಪ್ ಗ್ರೇಡ್ ಮಾಡುವುದಿಲ್ಲ. ರಸೀದಿ ಇಲ್ಲದಿದ್ದರೆ ಪುನಃ ತೆರಿಗೆ ಕಟ್ಟಬೇಕು. ಇದು ಸಂಪೂರ್ಣವಾಗಿ ಅಧಿಕಾರಿಗಳ ನಿರ್ಲಕ್ಷ್ಯತನವಾಗಿದೆ ಎಂದು ಪುರಸಭೆ ಸದಸ್ಯ ಸಿ.ಎಂ.ರಾಮು ಬೇಸರ ವ್ಯಕ್ತಪಡಿಸಿದರು.

‘ಪುರಸಭೆಯಲ್ಲಿ ಅರ್ಹ ಅರ್ಜಿದಾರರು, ನೇರವಾಗಿ ಬಂದು ಖಾತೆಗಾಗಿ ಅರ್ಜಿ ಕೊಟ್ಟರೆ, ಇಲ್ಲಿ ಖಾತೆಗಳಾಗುವುದಿಲ್ಲ. ಮಧ್ಯವರ್ತಿಗಳು, ಪ್ರಭಾವಿಗಳ ಮೂಲಕ ಬಂದರೆ ಅಧಿಕಾರಿಗಳು ಮೂರೇ ದಿನಕ್ಕೆ ಖಾತೆ ಮಾಡಿಕೊಡುತ್ತಾರೆ. ಬಡವರ ಖಾತೆಗಳಿಗೆ ಸರ್ವರ್ ಸಮಸ್ಯೆ ಕಾಡುತ್ತದೆ. ಪ್ರಭಾವಿಗಳು ತಂದು ಕೊಡುವ ಖಾತೆಗಳು ಬೇಗನೆ ಆಗುತ್ತವೆ ಇಂತಹ ವ್ಯವಸ್ಥೆ ಇಲ್ಲಿದೆ’ ಎಂದು ರಾಜ್ಯ ಡಾ.ಬಿ.ಆರ್.ಅಂಬೇಡ್ಕರ್ ರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷ ಸಿ.ಶ್ರೀನಿವಾಸ್ ಆರೋಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-15-1523038526

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.