ವಿಜಯಪುರ (ದೇವನಹಳ್ಳಿ): ಇಲ್ಲಿಯ ನಗರ್ತ ಮಹಿಳಾ ಸಂಘದಿಂದ ‘ರಜಾ ಮಜಾ' ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.

ರಂಗಭೂಮಿ ಚಟುವಟಿಕೆಗಳು, ಕೋಲಾಟ, ವೀರಗಾಸೆ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲೆಗಳಲ್ಲಿ ತರಬೇತಿ ಪಡೆದ ಮಕ್ಕಳು, ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿ ಗಮನ ಸೆಳೆದರು.

ಮಕ್ಕಳಿಗೆ ಕೇವಲ ಪಠ್ಯಧಾರಿತ ಶಿಕ್ಷಣ ನೀಡಿದರೆ ಸಾಲದು, ಅವರ ಮನಸ್ಸನ್ನು ಅರಳಿಸಲು ಮತ್ತು ಪ್ರತಿಭೆಯನ್ನು ಹೊರಹಾಕಲು ಪಠ್ಯೇತರ ಚಟುವಟಿಕೆಗಳು ಅತ್ಯಗತ್ಯ ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ (ಪ್ರೌಢಶಾಲಾ ವಿಭಾಗ) ಉಪಪ್ರಾಂಶುಪಾಲೆ ಕೋಮಲ ತಿಳಿಸಿದರು.

ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ಕ್ರಿಯಾಶೀಲತೆಯನ್ನು ಹೆಚ್ಚಿಸುವುದಲ್ಲದೆ, ಅವರನ್ನು ದೈಹಿಕವಾಗಿ ಸದೃಢರನ್ನಾಗಿ ಮಾಡುತ್ತವೆ ಎಂದು ವಿನಾಯಕ ಭಕ್ತ ಮಂಡಳಿಯ ಅಧ್ಯಕ್ಷ ಎಂ.ಶಂಕರ್ ಹೇಳಿದರು.

ಮಕ್ಕಳು ರಜಾ ದಿನಗಳಲ್ಲಿ ಟಿವಿ, ಮೊಬೈಲ್ಗಳಿಗೆ ಅಂಟಿಕೊಳ್ಳುತ್ತಿದ್ದಾರೆ.ಅದರಿಂದ ಹೊರಬಂದು ಇಂತಹ ಶಿಬಿರಗಳಲ್ಲಿ ಪಾಲ್ಗೊಂಡರೆ ಬುದ್ಧಿಶಕ್ತಿ ಮತ್ತು ಆರೋಗ್ಯ ಎರಡೂ ವೃದ್ಧಿಸುತ್ತದೆ ಎಂದು ಮಹಂತಿನ ಮಠದ ಅಧ್ಯಕ್ಷ ಪುನೀತ್ ತಿಳಿಸಿದರು.

ನಗರ್ತ ಮಹಿಳಾ ಸಂಘದ ಅಧ್ಯಕ್ಷೆ ದೀಪಾ ಮುರಳಿಧರ್, ಕಾರ್ಯದರ್ಶಿ ರೂಪ ಭಾಸ್ಕರ್, ನಿರ್ದೇಶಕರಾದ ಭಾರತಿ ಶಿವಪ್ರಸಾದ್, ಶೀಲಾ ಸುರೇಶ್, ಕಲಾ ರುದ್ರಮೂರ್ತಿ, ಉಪನ್ಯಾಸಕ ಪ್ರಭುರಾಜ್, ಇನ್ನರ್ ವ್ಹೀಲ್ ಸಂಸ್ಥೆಯ ನವ್ಯ ನವೀನ್, ಮಂಜುಳಾ ಕಿರಣ್, ರಾಷ್ಟ್ರೀಯ ಬಸವದಳದ ಖಜಾಂಚಿ ಬೇಕರಿ ವಿ.ಶಿವಣ್ಣ, ವಿ.ಶಿವಕುಮಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-15-624462524

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.