ವಿಜಯಪುರ (ದೇವನಹಳ್ಳಿ): ಪಟ್ಟಣದ ರೇಣುಕಾ ಯಲ್ಲಮ್ಮ ದೇವಾಲಯದ 87ನೇ ವರ್ಷದ ಹೂವಿನ ಕರಗ ಮಹೋತ್ಸವ ಅಂಗವಾಗಿ ಸೋಮವಾರ ರಾತ್ರಿ ಹಸಿ ಕರಗ ನಡೆಯಿತು.

ಹಸಿ ಕರಗ ಹೊತ್ತು ಪೂಜಾರಿ ಜೆ.ಆರ್.ದೇವರಾಜ್ ಅವರು ಪಟ್ಟಣದಲ್ಲಿ ಸಂಚರಿಸಿದರು. ಕರಗ ಬರುವ ಬೀದಿಗಳಿಗೆ ವಿದ್ಯುತ್ ಅಲಂಕಾರ ಮಾಡಲಾಗಿತ್ತು. ಮಹಿಳೆಯರು ತಮ್ಮ ಮನೆ ಮುಂದೆ ರಂಗೋಲಿ ಬಿಡಿಸಿ ಹಸಿಕರಗಕ್ಕೆ ಪೂಜೆ ಸಲ್ಲಿಸಿದರು.

ಮಂಗಳವಾರ ರೇಣುಕಾ ಯಲ್ಲಮ್ಮದೇವಿಗೆ ಅಭಿಷೇಕ, ಹೂವಿನ ಅಲಂಕಾರ, ಮಹಾಮಂಗಳಾರತಿ ನಡೆಯಿತು. ರಾತ್ರಿ 7 ಗಂಟೆಗೆ ದೀಪಾರತಿ, ಅಗ್ನಿಪ್ರವೇಶ ಕಾರ್ಯಕ್ರಮಗಳು ಜರುಗಿದವು.

ಏ. 1 ರಂದು ರೇಣುಕಾ ಯಲ್ಲಮ್ಮ ಹೂವಿನ ಕರಗ ಮಹೋತ್ಸವ ನಡೆಯಲಿದೆ. ಅಂದು ಪಟ್ಟಣದ ನಗರೇಶ್ವರ ಮತ್ತು ಆದಿನಾರಾಯಣ 11ನೇ ವರ್ಷದ ಹರಿ-ಹರ ಕಲ್ಲುಗಾಲಿ ರಥೋತ್ಸವ, ಚಿಕ್ಕ ಮಕ್ಕಳಿಂದ ಎಳೆಯಲ್ಪಡುವ 41ನೇ ವರ್ಷದ ಬಲಮುರಿ ಗಣಪತಿ, ಭದ್ರಕಾಳಿ ಸಮೇತ ರುದ್ರದೇವರ ರಥೋತ್ಸವ ನಡೆಯಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-15-282982721

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.