ವಿಜಯಪುರ(ದೇವನಹಳ್ಳಿ): ಇಲ್ಲಿಯ ಚನ್ನಕೇಶವ ದೇವಾಲಯ ಆವರಣದಲ್ಲಿ ಕೃಷ್ಣ ಯತಿಂದ್ರ ಸತ್ಸಂಗ ಸೇವಾ ಟ್ರಸ್ಟ್ ವತಿಯಿಂದ ಆದಿಗುರು ಶಂಕರಾಚಾರ್ಯ ಮತ್ತು ರಾಮಾನುಜಾಚಾರ್ಯ ಜಯಂತಿ ಆಚರಿಸಲಾಯಿತು.

ಶಂಕರಾರ್ಚಾರರು ಅದ್ವೈತ ತತ್ವವನ್ನು ಜಗತ್ತಿಗೆ ಸಾರುವ ಮೂಲಕ ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದರು. ಕೇವಲ 32 ವರ್ಷಗಳ ಕಾಲ ಬದುಕಿದ್ದ ಅವರು ಮಹೋನ್ನತ ಸಾಧನೆಯನ್ನು ಮಾಡಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ಮಾಡಿ ದೇಶದ ನಾಲ್ಕು ದಿಕ್ಕುಗಳಲ್ಲಿ ಶಕ್ತಿ ಪೀಠ ಸ್ಥಾಪಿಸಿದರು ಎಂದು ಯೋಗ ದೀವಿಗೆ ಸಂಸ್ಥಾಪಕ ವಿ.ರವೀಂದ್ರ ತಿಳಿಸಿದರು.

ಭಗವದ್ ರಾಮಾನುಜರು ಕ್ರಿ.ಶ 1,017ರಲ್ಲಿ ತಮಿಳುನಾಡಿನ ಶ್ರೀಪೆರುಂಬೂದೂರ್ ಕ್ಷೇತ್ರದಲ್ಲಿ ಜನಿಸಿದರು. ಅವರು ಒಂಬತ್ತು ಕಜೃತಿ ರಚಿಸಿದ್ದು, ಅವುಗಳನ್ನು ನವರತ್ನ ಎಂದು ಕರೆಯಲಾಗುತ್ತದೆ. ಭಕ್ತಿಯ ಮಹತ್ವವನ್ನು ಪ್ರಪಂಚಕ್ಕೆ ಸಾರಿದ ಶಂಕರ, ರಾಮಾನುಜರ ತತ್ವಗಳನ್ನು ಎಲ್ಲರೂ ಪಾಲಿಸಬೇಕು ಎಂದರು.

ಸಂಗೀತ ನಿರ್ದೇಶಕ ಎಂ.ವಿ.ನಾಯ್ಡು ತಂಡದಿಂದ ಕೀರ್ತನೆ ಹಾಡಲಾಯಿತು. ದೇವಾಲಯ ಪ್ರಧಾನ ಅರ್ಚಕ ಮುರುಳೀಧರ ಭಟ್ಟಾಚಾರ್ಯ ಆಶೀರ್ವಚನ ನೀಡಿದರು. ಟ್ರಸ್ಟ್ ಸಂಚಾಲಕ ವಿ.ಎನ್.ವೆಂಕಟೇಶ್, ಧರ್ಮರಾಯಸ್ವಾಮಿ ಸ್ವಾಮಿ ದೇವಾಲಯದ ಅಧ್ಯಕ್ಷ ಕೆ.ವಿ.ಮುನಿರಾಜು, ಮೀನಾಕ್ಷಮ್ಮ, ಮುನಿರಾಜು, ಮೇಘನಾ, ಮಂಜುನಾಥ್, ವಿಜಯಪುರ ಟೌನ್ ಬಲಿಜ ಸಂಘದ ಉಪಾಧ್ಯಕ್ಷ ಎನ್.ರಾಮಾಂಜಿನಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-15-869203529

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.