ವಿಜಯಪುರ (ದೇವನಹಳ್ಳಿ): ಇಲ್ಲಿನ ಬಸವೇಶ್ವರ ನಗರದಲ್ಲಿ ಬೆಂ.ಗ್ರಾ ಜಿಲ್ಲಾ ಕದಳಿ ಮಹಿಳಾ ವೇದಿಕೆ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ಶಿವಶರಣ ಅಲ್ಲಮಪ್ರಭು, ದೇವರ ದಾಸಿಮಯ್ಯ ಹಾಗೂ ಬಿಬ್ಬಿ ಬಾಚಯ್ಯ ಜಯಂತಿ ಆಚರಿಸಲಾಯಿತು.

ಶರಣರ ತತ್ವಗಳು ಸಮಾಜಕ್ಕೆ ದಾರಿ ದೀಪವಾಗಿದ್ದು, ಮಹಿಳೆಯರನ್ನು ಸಂಘಟಿಸಿ, ಅವರಲ್ಲಿ ಅಧ್ಯಾತ್ಮ ಹಾಗೂ ಸಾಮಾಜಿಕ ಪ್ರಜ್ಞೆ ಮೂಡಿಸುವಲ್ಲಿ ಕದಳಿ ಮಹಿಳಾ ವೇದಿಕೆ ಶ್ರಮಿಸುತ್ತಿದೆ ಎಂದು ವೇದಿಕೆ ಜಿಲ್ಲಾಧ್ಯಕ್ಷೆ ಸ್ವರ್ಣಗೌರಿ ಮಹದೇವ್ ತಿಳಿಸಿದರು.

ಅಲ್ಲಮಪ್ರಭುಗಳು ಜ್ಞಾನದ ಸಂಕೇತ. ಅವರ ವಚನಗಳು ಮನುಷ್ಯನ ಅಹಂಕಾರವನ್ನು ಅಳಿಸಿ, ಆತ್ಮಸಾಕ್ಷಾತ್ಕಾರದತ್ತ ನಡೆಸುತ್ತವೆ ಎಂದು ವೇದಿಕೆ ಸದಸ್ಯೆ ಶ್ವೇತಾ ಮಂಜುನಾಥ್ ಹೇಳಿದರು.

ಶಿವಶರಣ ಬಿಬ್ಬಿ ಬಾಚಯ್ಯನವರ ಜೀವನ ನಮಗೆ ಸತ್ಯ ಮತ್ತು ನಿಷ್ಠೆಯ ಹಾದಿಯನ್ನು ತೋರಿಸಿಕೊಟ್ಟಿದ್ದಾರೆ ಎಂದು ಸೌಮ್ಯ ಶಶಿಧರ್ ಸ್ಮರಿಸಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಹಡಪದ್, ಕಾರ್ಯದರ್ಶಿ ಆರ್.ಮುನಿರಾಜು, ರಾಷ್ಟ್ರೀಯ ಬಸವದಳದ ಟೌನ್ ಕಾರ್ಯದರ್ಶಿ ಮ. ಜಯದೇವ್, ರೂಪ ಭಾಸ್ಕರ್, ಆಶಾ ರವಿ, ಮಮತಾ, ಭವ್ಯ, ಆದರ್ಶ, ಅನುಷಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-15-1426127537

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.