ವಿಜಯಪುರ (ದೇವನಹಳ್ಳಿ): ಹೋಬಳಿಯಾದ್ಯಂತ ಸಿಹಿ ಜೋಳ (ಸ್ವೀಟ್ ಕಾರ್ನ್) ತೋಟಗಳಲ್ಲಿ ಸೈನಿಕ ಹುಳ ಬಾಧೆ ಕಾಣಿಸಿಕೊಂಡಿದ್ದು, ಇದರಿಂದ ಕಂಗಾಲಾಗಿರುವ ರೈತರು ಬೆಳೆ ನಷ್ಟ ಅನುಭವಿಸುವ ಭೀತಿ

ಬೆಳೆಯುವ ಹಂತದಲ್ಲಿರುವಾಗಲೇಜೋಳದ ಸುಳಿ, ಎಲೆ, ಕಾಂಡವನ್ನು ತಿದ್ದು ಹಾಕುತ್ತಿರುವ ಸೈನಿಕ ಹುಳಗಳಿಂದ ಬೆಳೆ ಕುಂಠಿತವಾಗುತ್ತಿದೆ. ಕಾಳು ಕಟ್ಟುವ ಹಂತದಲ್ಲಿರುವ ತೆನೆಯಲ್ಲೂ ಹುಳ ಕಾಣಿಸಿಕೊಳ್ಳುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ.

ಒಂದು ಎಕರೆ ಸಿಹಿ ಜೋಳ ಬೆಳೆಯಲು ಸುಮಾರು ₹30 ರಿಂದ ₹40 ಸಾವಿರ ಖರ್ಚು ಮಾಡಿದ್ದು, ಸೈನಿಕ ಹುಳ ನಿಯಂತ್ರಿಸಲು 3 ದಿನಗಳಿಗೊಮ್ಮೆ ರಾಸಾಯನಿಕ ಔಷಧಿ ಸಿಂಪಡಿಸಿದರೂ ಹುಳ ಬಾಧೆ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಉತ್ತಮ ಬೆಳೆಯಾಗುವ ನಿರೀಕ್ಷೆಯಲ್ಲಿದ್ದ ನಮಗೆ ಬೆಳೆ ಕೈಕೊಡುವ ಆತಂಕ ಕಾಡುತ್ತಿದೆ ಎಂದು ವೆಂಕಟೇನಹಳ್ಳಿ ರೈತ ನಾಗರಾಜು ತಿಳಿಸಿದರು.

ಹಿಂದೆ ಒಂದೂವರೆ ಎಕರೆ ಪ್ರದೇಶದಲ್ಲಿ ಸಿಹಿ ಜೋಳ ಹಾಕಿದ್ದೇವು. ಸೈನಿಕ ಹುಳ ಬಾಧೆ ಅಷ್ಟಾಗಿ ಇರಲಿಲ್ಲ. ಈ ಸಾರಿ ಹೆಚ್ಚಾಗಿ ಸೈನಿಕ ಹುಳ ಬಾಧೆ ಕಾಣಿಸಿಕೊಂಡಿದ್ದು, ನಷ್ಟದ ಭೀತಿ ಎದುರಾಗಿದೆ. ಕೃಷಿ ಇಲಾಖೆ ಅಧಿಕಾರಿಗಳು ರೈತರ ಜಮೀನುಗಳಿಗೆ ತೆರಳಿ ರೈತರಿಗೆ ಸಲಹೆ, ಸೂಚನೆಗಳನ್ನು ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-15-461097215

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.