ವಿಜಯಪುರ (ದೇವನಹಳ್ಳಿ): ಯುಗಾದಿ ಹಬ್ಬದ ಪ್ರಯುಕ್ತ ವಿಜಯಪುರ ಪಟ್ಟಣದ ಕಸಾಪ ವತಿಯಿಂದ 8ನೇ ವಾರ್ಡಿನ ಒಕ್ಕಲಿಗ ಬೀದಿ ಹಾಗೂ ರಾಮಮಂದಿರ ಬೀದಿಯಲ್ಲಿ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ರಂಗೋಲಿ ಸ್ಪರ್ಧೆಯಲ್ಲಿ ಸಾವಿತಮ್ಮ ಪ್ರಥಮ, ಮಂಗಳಮ್ಮ ದ್ವಿತೀಯ, ಲಕ್ಷ್ಮೀ ತೃತೀಯ ಬಹುಮಾನ ಪಡೆದರೆ 8 ಮಂದಿಗೆ ಸಮಾಧಾನಕರ ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ರಂಗೋಲಿಯು ನಮ್ಮ ಸಂಸ್ಕೃತಿ ಸಂಕೇತವಾಗಿದೆ. ರಂಗೋಲಿಯಿಂದಲೇ ಆ ಮನೆಯ ಸಂಸ್ಕೃತಿ, ಸಂಪ್ರದಾಯ, ಹಿನ್ನಲೆ ತಿಳಿಯಬಹುದು. ರಂಗೋಲಿ ಬಿಡಿಸುವುದರಿಂದ ಮನಸ್ಸಿಗೆ ಖುಷಿ ಸಂತೋಷದ ಜೊತೆಗೆ ಆರೋಗ್ಯವು ದೊರೆಯುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೃಷ್ಣಪ್ಪ ತಿಳಿಸಿದರು.

ನಮ್ಮ ಹಿಂದಿನ ಸಂಪ್ರದಾಯ ಹಾಗೂ ಸಾಂಸ್ಕೃತಿ ಚಟುವಟಿಕೆಗಳನ್ನು ಉಳಿಸಿ, ಬೆಳೆಸಲು ಇಂತಹ ಸ್ಪರ್ಧೆಗಳು ಅನಿವಾರ್ಯವಾಗಿದೆ ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಆರ್.ಕೆ.ನಂಜೇಗೌಡ ಹೇಳಿದರು.

ವಿಜಯಪುರ ನಗರ ಘಟಕದ ಅಧ್ಯಕ್ಷ ಎನ್.ಕನಕರಾಜು, ತಾಲ್ಲೂಕು ಕಸಾಪ ಉಪಾಧ್ಯಕ್ಷ ಜೆ.ಆರ್.ಮುನಿವೀರಣ್ಣ, ಜಿಲ್ಲಾ ಕೋಶಧ್ಯಕ್ಷ ಅಪ್ಪಯ್ಯಣ್ಣ, ಸಾಹಿತಿ ಶರಣಯ್ಯ ಹಿರೇಮಠ್, ಜೆಸಿಐ ಮಾಜಿ ಅಧ್ಯಕ್ಷ ಎನ್ ಸಿ ಮುನಿವೆಂಕಟರಮಣ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-15-1666997068

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.