ವಿಜಯಪುರ (ದೇವನಹಳ್ಳಿ): ಅಡುಗೆ ಅನಿಲ ಅಭಾವದಿಂದ ನಗರದ ಹೆಚ್ಚಿನ ಹೋಟೆಲ್ ಬಾಗಿಲು ಹಾಕಿದ ಕಾರಣ ತರಕಾರಿ ಕೊಳ್ಳುವವರಿಲ್ಲದೆ ತರಕಾರಿ, ಸೊಪ್ಪುಗಳ ಬೆಲೆಗಳು ಕುಸಿತ ಕಂಡಿವೆ.

ಹೆಚ್ಚಾಗಿ ಇಲ್ಲಿಯ ರೈತರು ತರಕಾರಿ, ಸೊಪ್ಪು ಬೆಳೆದು ಆದಾಯ ಗಳಿಸುತ್ತಾರೆ. ಆದರೆ, ಸದ್ಯದ ಸ್ಥಿತಿಯಲ್ಲಿ ಬಹುತೇಕ ತರಕಾರಿ ಬೆಲೆಗಳು ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿವೆ. ಕೆಲವು ತರಕಾರಿ ಬೆಳೆಯಲು ಮಾಡಿದ ಖರ್ಚು ಕೂಡ ರೈತರಿಗ ಧಕ್ಕುತ್ತಿಲ್ಲ. ಕಳೆದ ಬೇಸಿಗೆಗೆ ಹೋಲಿಸಿದರೆ ಈ ಬಾರಿ ಎರಡರಿಂದ ಮೂರು ಪಟ್ಟು ಬೆಲೆ ಕುಸಿತಗೊಂಡಿದೆ ಎನ್ನುತ್ತಾರೆ ರೈತರು.

ಔಷಧಿ, ಗೊಬ್ಬರ ಸಿಂಪಡಣೆ, ಕೂಲಿ ಖರ್ಚು ಹೀಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ತರಕಾರಿಯನ್ನು ಮಾರುಕಟ್ಟೆಯಲ್ಲಿ ಕೇಳಿದಷ್ಟು ಬೆಲೆಗೆ ಮಾರಾಟ ಮಾಡಬೇಕಾದ ಪರಿಸ್ಥಿತಿ ಇದೆ ಎನ್ನುತ್ತಾರೆ ರೈತರು.

‘ಮುಕ್ಕಾಲು ಎಕರೆಗೆ ಐದೂವರೆ ಸಾವಿರ ನಾರು ಕ್ಯಾಪ್ಸಿಕಂ ನಾಟಿ ಮಾಡಿ, ಚೆನ್ನಾಗಿ ಬೆಳೆದಿದ್ದೇವೆ. ಒಂದು ನಾರು ₹10 ಆಗುತ್ತದೆ.

ಔಷಧಿ, ಗೊಬ್ಬರ, ನೆಟ್ ಹೌಸ್ ಮಾಡಲು ಸುಮಾರು ₹3 ಲಕ್ಷ ಖರ್ಚು ಬಂದಿದೆ. 1 ತಿಂಗಳಿನಿಂದ 7 ಬಾರಿ ಕೊಯ್ಲು ಆಗಿದೆ. ಈಗ ಕೆ.ಜಿ.ಗೆ ₹25 ರಿಂದ ₹30 ದರ ಇದೆ. ಈ ಬೆಲೆಗೆ ಮಾರಾಟವಾದರೆ ಹಾಕಿದ ಬಂಡವಾಳ ಸಿಗುವುದಿಲ್ಲ' ಎಂದು ಮಂಡಿಬಲೆ ರೈತ ಮಧು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-15-1582375505

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.