ಶನಿವಾರ, ಆಗಸ್ಟ್ 13, 2022
23 °C

‘ಸಮಾಜಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ‘ವಿಶ್ವಕರ್ಮ ಸಮುದಾಯ ಸಮಾಜಕ್ಕೆ ನೀಡಿರುವ ಕೊಡುಗೆ ಅನನ್ಯ’ ಎಂದು ತಾಲ್ಲೂಕು ವಿಶ್ವಕರ್ಮ ಸಂಘದ ನೂತನ ಅಧ್ಯಕ್ಷ ಜಿ. ನಾರಾಯಣಚಾರ್ ಹೇಳಿದರು.

ಇಲ್ಲಿನ ಸೂಲಿಬೆಲೆ ರಸ್ತೆಯ ವಿಶ್ವಕರ್ಮ ಸಂಘದ ಆಡಳಿತ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಸಂಘದ ನೂತನ ಪದಾಧಿಕಾರಿಗಳ ನೇಮಕ ಸಭೆಯಲ್ಲಿ ಮಾತನಾಡಿದರು.

ಪ್ರಾಚೀನ ಪ್ರಾಗೈತಿಕ ಐತಿಹಾಸದಲ್ಲಿ ವಿವಿಧ ರಾಜಮಹಾರಾಜರು ತಮ್ಮ ಆಡಳಿತಾವಧಿಯಲ್ಲಿ ನಿರ್ಮಿಸಿರುವ ದೇವಾಲಯಗಳು, ಭವ್ಯ ಬಂಗಲೆಗಳು, ಕೋಟೆಗಳು ವಿಶ್ವಕರ್ಮಿಗಳ ಕಲಾವೈಭವದ ಸಂಕೇತವಾಗಿವೆ. ಇದನ್ನು ಯಾರು ಮರೆಯುವಂತಿಲ್ಲ ಹೇಳಿದರು.

ಪದಾಧಿಕಾರಿಗಳ ಆಯ್ಕೆ: ಎನ್. ಸತ್ಯನಾರಾಯಣಚಾರ್ ಗೌರವಾಧ್ಯಕ್ಷ, ಜಿ. ನಾರಾಯಣಚಾರ್ ಅಧ್ಯಕ್ಷ, ಎನ್. ಸುರೇಶ್ ಆಚಾರ್ ಪ್ರಧಾನ ಕಾರ್ಯದರ್ಶಿ, ಭಾಗ್ಯಮ್ಮ ಮಹಿಳಾ ಘಟಕ ಅಧ್ಯಕ್ಷೆ, ಎಚ್.ಎನ್. ದಾಕ್ಷಾಯಿಣಿ ಕಾರ್ಯದರ್ಶಿ, ಎ. ವಾಸುದೇವಾಚಾರ್ ಚಿನ್ನಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದರು. ಜಿ. ನಟರಾಜ್, ಬಿ.ಎಂ. ಕೃಷ್ಣಚಾರ್, ಕುಮಾರಚಾರ್, ಮೂರ್ತಾಚಾರ್, ಟಿ.ಆರ್. ಶ್ರೀನಿವಾಸಚಾರ್, ಉಮಾ, ಸುಧಾ, ಅಶ್ವಥಾಚಾರ್, ಶ್ರೀನಿವಾಸಮೂರ್ತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.