ಮಂಗಳವಾರ, ಫೆಬ್ರವರಿ 25, 2020
19 °C

ಹಾರಗದ್ದೆ ವಿಎಸ್ಎಸ್ಎನ್ ಅಧ್ಯಕ್ಷರಾಗಿ ಪ್ರಭಾಕರರೆಡ್ಡಿ ಅವಿರೋಧ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ತಾಲ್ಲೂಕಿನ ಹಾರಗದ್ದೆ ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ನೊಸೇನೂರಿನ ಪ್ರಭಾಕರರೆಡ್ಡಿ ಮತ್ತು ಉಪಾಧ್ಯಕ್ಷರಾಗಿ ಗೀತಾನರಸಿಂಹಮೂರ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

2020-25ನೇ ಸಾಲಿಗೆ ನಡೆದ ಚುನಾವಣೆಯಲ್ಲಿ ಪ್ರಭಾಕರರೆಡ್ಡಿ ಮತ್ತು ಗೀತಾನರಸಿಂಹಮೂರ್ತಿ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾಗಿದ್ದಾರೆ.

ನೂತನ ಅಧ್ಯಕ್ಷ ಪ್ರಭಾಕರರೆಡ್ಡಿ ಮಾತನಾಡಿ, ‘ಹಾರಗದ್ದೆ ವ್ಯವಸಾಯ ಸೇವಾ ಸಹಕಾರ ಸಂಘವು ರೈತ ಸ್ನೇಹಿಯಾಗಿ ಕೆಲಸ ಮಾಡುತ್ತಿದ್ದು ಪಕ್ಷಾತೀತವಾಗಿ ಜನರ ಸೇವೆ ಮಾಡುವ ಮೂಲಕ ಮಾದರಿ ಸಂಘವನ್ನಾಗಿ ಮಾಡುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಪಡೆದು ಕೆಲಸ ಮಾಡಲಾಗುವುದು. ಸಂಘದ ಕಟ್ಟಡವು ರಸ್ತೆ ವಿಸ್ತರಣೆಯಿಂದಾಗಿ ತೆರವುಗೊಳ್ಳಲಿದೆ. ಮುಂಬರುವ ದಿನಗಳಲ್ಲಿ ಸಮೀಪದಲ್ಲಿ ಸಿಎ ಸೈಟ್‌ ಪಡೆದು ಸುಸಜ್ಜಿತ ಕಟ್ಟಡವನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಸಂಘದ ಸಂಪೂರ್ಣ ವ್ಯವಹಾರವನ್ನು ಗಣಕೀಕರಣ ಮಾಡಲಾಗುವುದು. ಈ ಭಾಗದ ರೈತರು ಠೇವಣಿ ನೀಡುವ ಮೂಲಕ ಸಂಘದ ಬಲವರ್ಧನೆಗೆ ಸಹಕಾರ ನೀಡಬೇಕು. ಸರ್ಕಾರದಿಂದ ದೊರೆಯುವ ಎಲ್ಲ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಕೆಲಸ ಮಾಡಲಾಗುವುದು’ ಎಂದರು.

ಸಂಘದ ನಿರ್ದೇಶಕರಾದ ಕೆ.ಮಹೇಶ್‌, ಪಿ.ಧನಂಜಯ, ಎಚ್.ಆರ್‌.ಪ್ರಭಾಕರ್‌, ಬಿ.ಮುನಿರಾಜು, ಎಂ.ರಮೇಶ್‌ರೆಡ್ಡಿ, ರುಕ್ಮೀಣಮ್ಮ, ಕೆ.ಆರ್.ಅಶ್ವಥಪ್ಪ, ಸಿ.ಗೋಪಾಲ್‌, ಎಂ.ಯಲ್ಲಪ್ಪ, ರುದ್ರಪ್ಪ, ಮುಖಂಡರಾದ ಎಚ್.ಎಸ್.ಬಸವರಾಜು, ಕೆ.ಎಸ್.ನಟರಾಜ್, ಹಾ.ವೇ.ವೆಂಕಟೇಶ್, ಶ್ರೀನಿವಾಸ್‌ರೆಡ್ಡಿ, ಎಂ.ರವಿಚಂದ್ರ, ಮಂಜುನಾಥ್‌ರೆಡ್ಡಿ, ಸಂಪಂಗಿರಾಜು, ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಶ್ರೀಧರ್‌, ಗ್ರಾಮ ಪಂಚಾಯಿತಿ ಸದಸ್ಯರಾದ ಹಾರಗದ್ದೆ ಮುನಿರಾಜು, ಮಾರಪ್ಪ, ಶ್ರೀನಿವಾಸ್‌ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)