ವಿಜಯಪುರ (ದೇವನಹಳ್ಳಿ): ಪಟ್ಟಣದ ಶಿಡ್ಲಘಟ್ಟ ಕ್ರಾಸ್ ಬಳಿಯ ಈದ್ಗಾ ಮೈದಾನ ಬಳಿ ಅಕ್ರಮವಾಗಿ ಮುಚ್ಚಿ ಹಾಕಲಾಗಿರುವ ರಾಜಕಾಲುವೆ ಜಾಗವನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈದ್ಗಾ ಮೈದಾನಕ್ಕೆ ಸಂಬಂಧಿಸಿದಂತೆ ವಕ್ಫ್ ಹೆಸರಿನಲ್ಲಿ 6 ಗುಂಟೆ ಜಮೀನು ಇದೆ. ಈಗ ಮುಸ್ಲಿಂ ಸಮುದಾಯದ ಹಲವರು ವಕ್ಫ್ ಹೆಸರಿನಲ್ಲಿ ಇಲ್ಲಿನ ರಾಜಕಾಲುವೆ ಮುಚ್ಚಿ ಹಾಕಿ ಕಬಳಿಸಲು ಮುಂದಾಗಿದ್ದಾರೆ ಎಂದು ಬಜರಂಗದಳದ ಮುಖಂಡ ಕೃಷ್ಣಮೂರ್ತಿ ಆರೋಪಿಸಿದ್ದಾರೆ.

ಈದ್ಗಾ ಮೈದಾನಕ್ಕೆ ಸೇರಿದ ಜಾಗವನ್ನು ಅಳತೆ ಮಾಡಿಸಿ, ಉಳಿದ ಸ್ವತ್ತನ್ನು ಸಾರ್ವಜನಿಕರ ಬಳಕೆಗೆ ಮೀಸಲಿಡಬೇಕು. ಸಾರ್ವಜನಿಕ ಸ್ವತ್ತಾದ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡವರ ವಿರುದ್ಧ ಪುರಸಭೆ, ಕಂದಾಯ ಇಲಾಖೆ ಮತ್ತು ಜಿಲ್ಲಾಧಿಕಾರಿಗಳು ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.