7

ಹಳೇ ವಿದ್ಯಾರ್ಥಿಗಳಿಂದ ನೀರಿನ ಘಟಕ ಕೊಡುಗೆ

Published:
Updated:
ಶ್ರೀಕೊಂಗಾಡಿಯಪ್ಪ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ಹಳೆಯ ವಿದ್ಯಾರ್ಥಿಗಳಿಂದ ಕಾಲೇಜಿಗೆ ಶುದ್ಧ ನೀರಿನ ಘಟಕ ನೀಡಲಾಯಿತು

ದೊಡ್ಡಬಳ್ಳಾಪುರ: ನಗರದ ಶ್ರೀಕೊಂಗಾಡಿಯಪ್ಪ ಪದವಿ ಕಾಲೇಜಿನ ವಾಣಿಜ್ಯ ವಿಭಾಗದ ಹಳೆಯ ವಿದ್ಯಾರ್ಥಿಗಳಿಂದ ಕಾಲೇಜು ಆವರಣದಲ್ಲಿ ನಿವೃತ್ತ ಪ್ರಾಧ್ಯಾಪಕ ಬಿ.ಎನ್. ಶಶಿಧರ್ ಅವರ ಹುಟ್ಟುಹಬ್ಬದ ಅಂಗವಾಗಿ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆ ಹಾಗೂ ಮಕ್ಕಳಿಗೆ ಸಿಹಿ ಹಂಚುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಆರ್.ಎನ್. ಪಂಚಾಕ್ಷರಯ್ಯ ಮಾತನಾಡಿ, ಪ್ರಸ್ತುತ ಕಾಲಘಟ್ಟಕ್ಕೆ ಶಿಕ್ಷಣ ಮೂಲಭೂತವಾಗಿ ಅಗತ್ಯವಿದೆ. ಸಮಾಜ ಪರವಾದ ಯಾವುದೇ ಅಂಶಗಳು ಮನುಷ್ಯನಲ್ಲಿ ಮೂಡಬೇಕಾದರೆ ಅದಕ್ಕೆ ಮುಖ್ಯ ಕಾರಣ ಶಿಕ್ಷಕನಾಗುತ್ತಾನೆ. ಅನೇಕರಿಗೆ ತಮ್ಮ ಬದುಕಿನಲ್ಲಿ ಹೀರೋ ಎನ್ನುವ ಪಾತ್ರವನ್ನು ಕೆಲವರಿಗೆ ಮಾತ್ರ ನೀಡಲಾಗುತ್ತದೆ. ಆ ವಿಚಾರದಲ್ಲಿ ವಿದ್ಯಾರ್ಥಿಗಳ ಬದುಕಿನ ಮೇಲೆ ಪ್ರಭಾವ ಬೀರುವಂತಹ ಗುರುವಿನ ಪಾತ್ರ ಮಹತ್ವದ್ದಾಗಿದೆ. ಇಂತಹ ಗುರುಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನಪರ್ಯಂತ ಹೀರೋ ಸ್ಥಾನದಲ್ಲಿಡುತ್ತಾರೆ ಎಂದು ಹೇಳಿದರು.

ನಿವೃತ್ತ ಪ್ರಾಧ್ಯಾಪಕ ಬಿ.ಎನ್. ಶಶಿಧರ್ ಮಾತನಾಡಿ, ಉತ್ತಮ ಶಿಷ್ಯವರ್ಗವನ್ನು ಹೊಂದಬೇಕಾದರೆ ಗುರುವಿನ ನಡೆ ನುಡಿಯಲ್ಲಿ ಉನ್ನತ ಅಂಶಗಳನ್ನು ಮೈಗೂಡಿಸಿಕೊಂಡಿರಬೇಕು. ಉತ್ತಮ ಸಮಾಜದ ನಿರ್ಮಾಣ ಕಾರ್ಯದಲ್ಲಿ ಗುರು ಮುಖ್ಯನಾಗುತ್ತಾನೆ ಎಂದು ಹೇಳಿದರು.

ವಾಣಿಜ್ಯ ವಿಭಾಗದ ಹಿರಿಯ ವಿದ್ಯಾರ್ಥಿಗಳು ಕಾಲೇಜಿನ ಆಡಳಿತ ಮಂಡಲಿ ನಿರ್ದೇಶಕರು ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !