ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗಳಿಗೆ ಹರಿದ ಮಳೆ ನೀರು: ರೈತರಲ್ಲಿ ಸಂತಸ

Last Updated 4 ಅಕ್ಟೋಬರ್ 2019, 13:51 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಗುರುವಾರ ಹಾಗೂ ಶುಕ್ರವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ಹಲವಾರು ಕೆರೆಗಳಿಗೆ ನೀರು ಹರಿದು ಬಂದಿವೆ.

ತಾಲ್ಲೂಕಿನ ಚನ್ನರಾಯಸ್ವಾಮಿ ಕೆರೆ ಕೋಡಿ ಬಿದ್ದಿದೆ. ಜನರ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿರುವ ನಗರದ ಹೈದಯ ಭಾಗದಲ್ಲಿನ ನಾಗರಕೆರೆ, ರೈಲ್ವೆ ನಿಲ್ದಾಣ ಸಮೀಪದ ಮುತ್ತೂರು ಕೆರೆ, ಕೈಗಾರಿಕಾ ಪ್ರದೇಶದಲ್ಲಿನ ಬಾಶೆಟ್ಟಿಹಳ್ಳಿ ಕೆರೆಗಳಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದ್ದು ಜನರಲ್ಲಿ ಸಂತಸ ಮೂಡಿಸಿದ್ದು ನೂರಾರು ಜನ ಕೆರೆ ಸಮೀಪಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡುತ್ತಿದ್ದಾರೆ.

ತಾಲ್ಲೂಕಿನ ಗುಂಡಮಗೆರೆ, ದೊಡ್ಡತುಮಕೂರು, ಅರಳುಮಲ್ಲಿಗೆ ಕೆರೆಗಳ ಅಂಗಳಕ್ಕು ಮಳೆ ನೀರು ಹರಿದು ಬಂದಿವೆ. ರಾಗಿ, ಮುಸುಕಿನ ಜೋಳದ ಬೆಳೆ ಉತ್ತಮವಾಗಿ ಬೆಳೆದಿದ್ದು ಇದೇರೀತಿ ಇನ್ನು15 ದಿನಗಳ ನಂತರ ಎರಡು ಮಳೆಯಾದರೂ ಉತ್ತಮ ರಾಗಿ ಬೆಳೆ ಬರುವ ನಿರೀಕ್ಷೆ ಇದೆ ಎನ್ನುತ್ತಾರೆ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕಾಡನೂರು ಮೂರ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT